March 26, 2026

ಪುತ್ತೂರು ಶಾಲೆಯಲ್ಲಿ ಬಿಸಿಯೂಟದ ಸಾಂಬಾರ್ ಗೆ ಜಾರಿ ಬಿದ್ದು ಮಹಿಳೆ ಸಾವು

0
Screenshot_2022-06-14-17-01-30-12_680d03679600f7af0b4c700c6b270fe7.jpg

ಪುತ್ತೂರು : ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಅಡುಗೆಯ ಸಾಂಬಾರ್ ಗೆ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳಾ ಕಾರ್ಮಿಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಅಗ್ನೆಸ್ ಪ್ರಮೀಳಾ ಡಿಸೋಜಾ (37) ಎಂದು ಗುರುತಿಸಲಾಗಿದೆ.

ಪ್ರಮೀಳಾ ಡಿಸೋಜಾ ಪುತ್ತೂರು ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಮೇ.30 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಕ್ಕಳಿಗೆ ಬಿಸಿ ಊಟದ ಅಡುಗೆ ಮಾಡಿಕೊಂಡಿರುವಾಗ, ಅಡುಗೆ ಮನೆಯ ಬಾಗಿಲ ಬಳಿ ತಯಾರು ಮಾಡಿ ಇಟ್ಟಿದ್ದ ಸಾಂಬಾರ್ ಪಾತ್ರೆಗೆ ಕಾಲು ಜಾರಿ ಬಿದ್ದ ಪರಿಣಾಮ ಪಾತ್ರೆಯಲ್ಲಿದ್ದ ಬಿಸಿ ಬಿಸಿ ಸಾಂಬಾರ್ ಪ್ರಮೀಳಾ ಮೈ ಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಹತ್ತಿದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಜೂ.12 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!