ನ.8 ತುಂಬೆಯಲ್ಲಿ ಡಾ| ಸುಮತಿ ಎಸ್ ಹೆಗ್ಡೆ ಯವರಿಗೆ ಅಭಿನಂದನಾ ಕಾರ್ಯಕ್ರಮ
ತುಂಬೆ: ಇತ್ತೀಚಿಗೆ ಬೆಂಗಳೂರಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿದ ಸಮಾಜ ಸೇವಕಿ, ಬಡವರ ಬಂದು’ ಲಯನ್ಸ್ ಡಿ ಸಿ ಡಾ ಸುಮತಿ ಎಸ್ ಹೆಗ್ಡೆ” ಮತ್ತು ಪತ್ರಕರ್ತ ಇಂತಿಯಾಜ್ ಷಾ ರವರಿಗೆ ತುಂಬೆ ಫ್ರೆಂಡ್ಸ್ ಸರ್ಕಲ್ ವತಿಯಿಂದ ಗೌರವ ಅಭಿನಂದನಾ ಕಾರ್ಯಕ್ರಮ ತುಂಬೆ ಜಂಕ್ಷನ್ ನಲ್ಲಿ ನವೆಂಬರ್ 8 ರಂದು ಸಂಜೆ ೬ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಇಶಾಕ್ ತುಂಬೆ ವಹಿಸಿಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಇಂತಿಯಾಜ್ ಎ ಕೆ ತುಂಬೆ, ಮುಖ್ಯ ಅತಿಥಿಗಳಾಗಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಆದಂ ಸಲಾಂ ಉಚ್ಚಿಲ ಮಾಲಕರು ರೊಯಲ್ ಗ್ರೂಪ್ ಬೆಂಗಳೂರು, ಕುಸುಮ ಯು ರಾವ್ ಮಂಗಳೂರು, ಜೆಡಿಎಸ್ ಯುವ ನಾಯಕ ಪೈಝಲ್ ರಹ್ಮಾನ್ ತುಂಬೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಝಹೂರು ತುಂಬೆ, ಅಬ್ದುಲ್ ಅಝೀಝ್, ಗಣೇಶ್ ಸಾಲಿಯನ್ ಮತ್ತು ಮಹಮ್ಮದ್ ವಳವೂರು ಭಾಗವಹಿಸಲಿದ್ದಾರೆ.





