February 3, 2026

ಡ್ರಗ್ಸ್‌ ಸೇವನೆ ಆರೋಪದಲ್ಲಿ ಬಾಲಿವುಡ್‌ ನಟ ಸಿದ್ದಾಂತ್‌ ಕಪೂರ್‌ ಬಂಧನ

0
image_editor_output_image2023456961-1655096124353.jpg

ಬೆಂಗಳೂರು: ಡ್ರಗ್ಸ್‌ ಸೇವನೆ ಆರೋಪದಲ್ಲಿ ಬಾಲಿವುಡ್‌ ನಟ ಶಕ್ತಿ ಕಪೂರ್‌ ಅವರ ಮಗ ಸಿದ್ದಾಂತ್‌ ಕಪೂರ್‌ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಎಂ.ಜಿ. ರಸ್ತೆ ಟ್ರಿನಿಟಿ ವೃತ್ತದ ಸಮೀಪ ಇರುವ ‘ದಿ ಪಾರ್ಕ್‌ ಹೋಟೆಲ್‌’ನಲ್ಲಿ ಹಲಸೂರು ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿ, ಡ್ರಗ್ಸ್‌ ಸೇವನೆ ಆರೋಪದ ಮೇಲೆ ಸಿದ್ದಾಂತ್‌ ಸೇರಿ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ.

ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಭಾಗಿಯಾಗಿರುವವರಿಗೆ ಡ್ರಗ್ಸ್‌ ಪೂರೈಕೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಲಸೂರು ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಮಾರು 35 ಮಂದಿ ಮಹಿಳೆಯರು ಮತ್ತು ಪುರುಷರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Leave a Reply

Your email address will not be published. Required fields are marked *

error: Content is protected !!