Think Green- Restore Ecosystem ಅಭಿಯಾನ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಗೆ ಗಿಡ ಹಸ್ತಾಂತರ
ವಿಟ್ಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಆಯೋಜಿಸಿರುವ Think Green – Restore Ecosystem ಎಂಬ ಅಭಿಯಾನವು ಸಿಎಫ್ಐ ವಿಟ್ಲ ಸಮಿತಿ ವತಿಯಿಂದ ಬುಧವಾರ ನಡೆಯಿತು.
ಇದರ ಪ್ರಯುಕ್ತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಗಿಡ ಹಸ್ತಾಂತರಿಸಲಾಯಿತು ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಮಾತುಕತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ವಿಟ್ಲ ಜಿಲ್ಲಾಧ್ಯಕ್ಷರಾದ ಫಯಾಝ್, ಕಾರ್ಯದರ್ಶಿ ಉಮ್ಮರ್ ಮುಕ್ತಾರ್, ಸಮಿತಿ ಸದಸ್ಯರಾದ ಹಕಂ, ವಿಟ್ಲ ವಲಯ ಅಧ್ಯಕ್ಷರಾದ ಸಿದ್ದೀಕ್, ಅಡ್ಯನಡ್ಕ ಘಟಕ ಅದ್ಯಕ್ಷರಾದ ಫಾರಿಸ್ ಮತ್ತು ನಿಹಾಲ್ ಉಪಸ್ತಿತರಿದ್ದರು.




