February 2, 2026

ಬಹರೈನ್: ಹೃದಯಾಘಾತವಾಗಿ ಬೆಳ್ತಂಗಡಿ ಮೂಲದ ವ್ಯಕ್ತಿ ಮೃತ್ಯು

0
image_editor_output_image348430765-1654933696202.jpg

ಬೆಳ್ತಂಗಡಿ: ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತವಾಗಿ ಬೆಳ್ತಂಗಡಿ ಮೂಲದ ಯುವಕನೋರ್ವ ಬಹರೈನ್ ನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಬ್ರಾಹಿಂ ನಾವೂರು(34) ಮೃತ ಯುವಕ. ಇವರು ಒಂದೂವರೆ ವರ್ಷದ ಹಿಂದೆ ಸುನ್ನತ್ ಕೆರೆಯ ಯುವತಿಯ ಜೊತೆ ವಿವಾಹವಾಗಿದ್ದರು. ದಂಪತಿಗಳಿಗೆ ಪುಟ್ಟ ಮಗು ಕೂಡ ಇದೆ.

ನಿನ್ನೆ ರಾತ್ರಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಇಬ್ರಾಹಿಂಗೆ ದಿಡೀರ್ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತವಾಗಿರೋದನ್ನು ದೃಢಪಡಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!