March 28, 2026

ಮತದಾನದ ಬ್ಯಾಲೆಟ್ ಪೇಪರ್ ನ್ನು ಡಿ.ಕೆ. ಶಿವಕುಮಾರ್ ಗೆ ತೋರಿಸಿದ ಎಚ್‌ಡಿ ರೇವಣ್ಣ:
ಮತವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ದೂರು

0
image_editor_output_image329494121-1654843182755.jpg

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣನವರು ಇಂದು ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಗೆ ಮತದಾನ ಮಾಡುತ್ತಿರುವ ಬ್ಯಾಲೆಟ್ ಪೇಪರ್ ನ್ನು ಡಿ ಕೆ ಶಿವಕುಮಾರ್ ಗೆ ತೋರಿಸಿದ್ದಾರೆ ಎಂದು ಆರೋಪಿಸಿ ಅವರ ಮತವನ್ನು ಅಸಿಂಧುಗೊಳಿಸುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿವೆ.

ವಿಧಾನಸೌಧದದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಈ ನಡುವೆ ವೊಟಿಂಗ್  ಬಳಿಕ ಹೆಚ್.ಡಿ ರೇವಣ್ಣ ಅವರು ಮತ ಹಾಕಿದ್ದನ್ನ ಡಿ.ಕೆ ಶಿವಕುಮಾರ್ ಅವರಿಗೆ ತೋರಿಸಿದ್ದಾರೆ. ಹೆಚ್.ಡಿ ರೇವಣ್ಣ ಮತವನ್ನ ಡಿಕೆ ಶಿವಕುಮಾರ್ ಗೆ ಪ್ರದರ್ಶಿಸಿದ್ದಾರೆ. ಹೀಗಾಗಿ  ಹೆಚ್.ಡಿ ರೇವಣ್ಣರ ಮತವನ್ನ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಪೊಲೀಸ್ ಏಜೇಂಟ್ ಪ್ರಕಾಶ್ ರಾಥೊಡ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!