February 3, 2026

ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ: ಅಸಾದುದ್ದೀನ್ ಓವೈಸಿ ವಿರುದ್ಧ ಎರಡು ಎಫ್‌ಐಆರ್‌ ದಾಖಲು

0
image_editor_output_image1507026301-1654764565684.jpg

ನವದೆಹಲಿ: ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಸಂಬಂಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ದೆಹಲಿ ಸೈಬರ್‌ ಪೊಲೀಸ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿದೆ.

ಓವೈಸಿಯೊಂದಿಗೆ ಯತಿ ನರಸಿಂಗಾನಂದ್ ಹೆಸರನ್ನು ಕೂಡಾ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಇದಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜದ ಸೌಹಾರ್ದಕ್ಕೆ ಭಂಗ ಉಂಟು ಮಾಡುವಂತ ಪೋಸ್ಟ್‌ ಪ್ರಕಟಿಸಿದ ಕಾರಣಕ್ಕಾಗಿ ಅಂತಹವರಿಗೂ ನೊಟೀಸ್‌ ನೀಡಿ ಮಾಹಿತಿ ಕೇಳಲಾಗಿದೆ.

ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಯಾವುದೇ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕದಿರಲು ಇದೇ ವೇಳೆ ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!