February 3, 2026

ಬಂಟ್ವಾಳ: ರಸ್ತೆ ಅಪಘಾತ, ಸುರಿಬೈಲಿನ‌ ರಿಕ್ಷಾ ಚಾಲಕ ಮೃತ್ಯು

0
image_editor_output_image827303813-1654669108813.jpg

ಬಂಟ್ವಾಳ: ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಸೀಟು ಲೋಡ್ ಮಾಡುತ್ತಿದ್ದ ವೇಳೆ ಹಿಂಬದಿಯ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ನೌಶಾದ್ ಸುರಿಬೈಲು (28) ಮೃತಪಟ್ಟ ವ್ಯಕ್ತಿ.
ಕಲ್ಲಡ್ಕ ಪೂರ್ಲಿಪ್ಪಾಡಿ ಕೆ.ಎನ್ ಬೇಕರಿ ಬಳಿಯ ರಸ್ತೆಯ ಬದಿಯಲ್ಲಿ ರಿಕ್ಷಾ ಟೆಂಪೋ ನಿಲ್ಲಿಸಿ ಸಿಮೆಂಟ್ ಸೀಟು ಲೋಡು ಮಾಡುವ ಸಮಯದಲ್ಲಿ ಕಾರೊಂದು ಹಿಂಬದಿಯಿಂದ ಬಂದು ನೌಶಾದ್ ಅವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ನೌಶಾದ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನೌಶಾದ್ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!