ಖಾಸಗಿ ಕಾಲೇಜು ಆವರಣದಲ್ಲಿ ಕಸದ ಬುಟ್ಟಿ:
ದೊಣ್ಣೆಯಿಂದ ಬಡಿದಾಡಿಕೊಂಡ ವಿದ್ಯಾರ್ಥಿಗಳು
ಜೈಪುರ: ಬೆಂಗಳೂರಿನಲ್ಲಿ ಇತ್ತೀಚಿಗೆ ಖಾಸಗಿ ಶಾಲೆಯ ಕೆಲವು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಜುಟ್ಟು ಹಿಡಿದುಕೊಂಡು ರಕ್ತಬರುವಂತೆ ಬಡಿದಾಡಿಕೊಂಡಿದ್ದು, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಅಂಥದೇ ಘಟನೆ ದೂರದ ರಾಜಸ್ತಾನದಲ್ಲಿ ನಡೆದಿದೆ.
ಕೆಲವು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದ, ಪ್ರತಿವಾದ ಹಿಂಸಾಚಾರಕ್ಕೆ ತಿರುಗಿದ್ದು, ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿತು. ಮುಷ್ಟಿ ಮತ್ತು ಕೋಲುಗಳನ್ನು ಬಳಸಿ ಪರಸ್ಪರ ಹಲ್ಲೆ ನಡೆಸಿರುವ ಘಟನೆ ಜೈಪುರದ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ ಹೊರಬಿದ್ದಿರುವ ವೀಡಿಯೊ ಕ್ಲಿಪ್ ಗಳಲ್ಲಿ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ಕೋಲುಗಳನ್ನು ಹಿಡಿದು ಓಡುತ್ತಿರುವುದು ಮತ್ತು ಬಡಿದಾಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಹಲವರು ಮುಷ್ಟಿಯುದ್ಧದಲ್ಲಿ ತೊಡಗಿದ್ದಾರೆ. ಕಾಲೇಜು ಆವರಣದ ತುಂಬೆಲ್ಲಾ ವಿದ್ಯಾರ್ಥಿಗಳು ಕೋಲು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ.
ಒಬ್ಬ ವ್ಯಕ್ತಿಯು ಕಸದ ಬುಟ್ಟಿ ಬಳಸಿ ತನ್ನನ್ನು ರಕ್ಷಿಸಿಕೊಳ್ಳುತ್ತಿರುವಾಗ, ಇನ್ನೊಬ್ಬನು ಕೋಲಿನೊಂದಿಗೆ ಅವನ ಬಳಿಗೆ ಹೊಡೆಯಲು ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.




