March 26, 2026

ಮಡಿಕೇರಿ: ಇನ್ನೋವಾ ಕಾರು ಮತ್ತು ಬೈಕ್‌ ನಡುವೆ ಅಪಘಾತ: ಓರ್ವ ಮೃತ್ಯು

0
n3933315001654609712187eb71633eb6c772f038363a453974cd287914682518320962f23f4f63042624a3.jpg

ಮಡಿಕೇರಿ: ಇನ್ನೋವಾ ಕಾರು ಮತ್ತು ಬೈಕ್‌ ನಡುವೆ ಢಿಕ್ಕಿ ಸಂಭವಿಸಿ ಕೇರಳ ಮೂಲದ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಹೊರ ವಲಯದ ಬೊಯಿಕೇರಿ ಬಳಿ ನಡೆದಿದೆ.

ಕಣ್ಣೂರಿನ ಮೊಹಮ್ಮದ್‌ ಶಾನಿಲ್‌(24) ಮೃತ ಯುವಕನಾಗಿದ್ದು, ರಫ್ಯಾದ್(24) ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕೇರಳ ಕಣ್ಣೂರು ಮೂಲದ ಮೊಹಮ್ಮದ್‌ ಶಾನಿಲ್‌ ಮತ್ತು ರಫ್ಯಾದ್ ಅವರು ಬೆಂಗಳೂರಿಗೆ ತೆರಳಿ, ಅಲ್ಲಿನ ಪ್ರವಾಸ ಮುಗಿಸಿಕೊಂಡು ಜೂ. 5ರಂದು ರಾತ್ರಿ ಬೆಂಗಳೂರು-ಮಡಿಕೇರಿ ಮಾರ್ಗವಾಗಿ ಕೇರಳ ಕಣ್ಣೂರಿಗೆ ತೆರಳುತ್ತಿದ್ದರು. ಜೂ. 6ರ ಬೆಳಗಿನ ಜಾವ ಮಡಿಕೇರಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 275ನ ಸಿಂಕೋನದ ಬಳಿ ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಇನ್ನೋವಾ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಇನ್ನೋವಾ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ರಫ್ಯಾದ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ತೀವ್ರತೆಗೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!