ಸುಳ್ಯ: ಖಾಸಗಿ ಶಾಲೆಯೊಂದರ ಬಿಸಿಯೂಟದ ಅಕ್ಕಿಯನ್ನು ಪಡಿತರ ಕೇಂದ್ರಕ್ಕೆ ಬದಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸುಳ್ಯ: ಅಡ್ಕಾರು ಖಾಸಗಿ ಶಾಲೆಯೊಂದರ ಅಧ್ಯಾಪಕರು ಬಿಸಿಯೂಟದ ಅಕ್ಕಿಯನ್ನು ಸ್ಥಳೀಯವಾಗಿ ಇದ್ದ ಪಡಿತರ ಅಂಗಡಿಗೆ ವರ್ಗಾಯಿಸಿರುವ ಮತ್ತು ವರ್ಗಾಯಿಸುವ ಸಂದರ್ಭದಲ್ಲಿ ಅಕ್ಕಿ ಮೂಟೆಯನ್ನು ಎತ್ತಲು ವಿದ್ಯಾರ್ಥಿಗಳ ಬಳಕೆ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋ ವೈರಲ್ ಮಾಡಿರುವವರು ಅಡ್ಕಾರು ಪಡಿತರ ಕೇಂದ್ರದಲ್ಲಿ ಶಾಲೆಯಲ್ಲಿ ಉಳಿದಿರುವ ಹುಳು ತುಂಬಿದ ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಿಸಿ ಶಾಲೆಗೆ ಉತ್ತಮ ಅಕ್ಕಿಯನ್ನು ನೀಡಿ ಪಡಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದ ಲೇಖನವನ್ನು ಬರೆದಿದ್ದಾರೆ.
ಈ ವಿಡಿಯೋ ಮತ್ತು ಲೇಖನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶಾಲೆಗೆ ವಿದ್ಯಾಭ್ಯಾಸಕ್ಕೆ ಪೋಷಕರು ಮಕ್ಕಳನ್ನು ಕಳುಹಿಸಿದರೆ ಶಾಲೆಯಲ್ಲಿ ಮಕ್ಕಳನ್ನು ಈ ರೀತಿ ಕೆಲಸಕ್ಕೆ ಬಳಸಿಕೊಂಡ ಶಾಲಾ ಅಧ್ಯಾಪಕರು ಮತ್ತು, ಸೊಸೈಟಿ ಸಿಬ್ಬಂದಿ ಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಹಾಗೂ ಇದಕ್ಕೆ ಶಿಕ್ಷಣ ಅಧಿಕಾರಿಗಳು ಮಧ್ಯಪ್ರವೇಶಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.




