ಗೋವಾ ಬೀಚ್ ನಲ್ಲಿ ಬ್ರಿಟನ್ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ
ಪಣಜಿ: ಉತ್ತರ ಗೋವಾದ ಅರಂಬೋಲ್ ಬೀಚ್ ಸಮೀಪದ ಪ್ರಸಿದ್ಧ ಸ್ವೀಟ್ ಲೇಕ್ ಸಮೀಪ ಬ್ರಿಟನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 32 ವರ್ಷದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಜೂನ್ 2ರಂದು ಸ್ವೀಟ್ ಲೇಕ್ ಸಮೀಪ ಬ್ರಿಟನ್ ಮಹಿಳೆ ವಿಶ್ರಾಂತಿ ಪಡೆಯುತ್ತಿದ್ದಾಗ ಸ್ಥಳೀಯ ನಿವಾಸಿ ಆರೋಪಿ ವಿನ್ಸೆಂಟ್ ಡಿ’ಸೋಜಾ ಅತ್ಯಾಚಾರ ನಡೆಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.




