ಬಂಟ್ವಾಳ: ಅಕ್ರಮವಾಗಿ ಜಾನುವಾರು ಸಾಗಾಟ, ಆರೋಪಿಯ ಬಂಧನ
ಬಂಟ್ವಾಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಉಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ ಜಾನುವಾರು ಮತ್ತು ಸಾಗಾಟಕ್ಕೆ ಬಳಕೆ ಮಾಡಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಉಳಿ ಗ್ರಾಮದ ಕಕ್ಯೆಪದವು ಮಹಮ್ಮದ್ ರಫೀಕ್ (34) ಎಂದು ಗುರುತಿಸಲಾಗಿದೆ.
ದೇವಸ್ಯಮುಡೂರು ಕಡೆಯಿಂದ ಕಕ್ಯೆಪದವು ಕಡೆಗೆ ನಸು ನೀಲಿ ಬಣ್ಣದ ಮಹೀಂದ್ರ ಜೀತೋ ವಾಹನದಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಪುಂಜಾಲಕಟ್ಟೆಪೊಲೀಸ್ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ. ಮತ್ತು ಸಿಬಂದಿ ಕಾರ್ಯಾಚರಣೆಗಿಳಿದಿದ್ದರು.
ಈ ವೇಳೆ ಕಕ್ಯೆಪದವು ಕಡೆಯಿಂದ ಬಂಟ್ವಾಳದುಳಿ ಗ್ರಾಮದ ಶ್ರಈ ಗೋಪಾಲಕೃಷ್ಣ ದೇವಸ್ಥಾನದ ಬಳಿ ಬೆಳಗ್ಗೆ ಸುಮಾರು 10.30 ರ ವೇಳೆಗೆ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ.ಈ ವೇಳೆ ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.




