March 26, 2026

ಮುಖ್ಯಮಂತ್ರಿ ಚಂದ್ರು ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

0
mukhyamantri-chandru.jpg

ಬೆಂಗಳೂರು: ಖ್ಯಾತ ನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಅವರು ಆಮ್‌ ಆದ್ಮಿ ಪಾರ್ಟಿ ಸೇರ್ಪಡೆಯಾಗಲಿದ್ದಾರೆ.

ಮಂಗಳವಾರ (ಜೂನ್‌ 7) ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಪರಾಗ್‌ ಹೋಟೆಲ್‌ ನಲ್ಲಿ ಹಿರಿಯ ನಾಯಕ ಎಎಪಿ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ ಅವರ ಸಮ್ಮುಖ ದಲ್ಲಿಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದ ಬೆನ್ನಲ್ಲೇ ಮುಖ್ಯಮಂತ್ರಿ ಚಂದ್ರು ಅವರಿಗೆ ಪೃಥ್ವಿರೆಡ್ಡಿ ಮತ್ತು ಪಕ್ಷದ ಮುಖಂಡರ ನಿಯೋಗ ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗಲು ಅಹ್ವಾನಿಸಿದ್ದರು.

ದೆಹಲಿ ಮಾದರಿಯ ಶೈಕ್ಷಣಿಕ, ಆರೋಗ್ಯ, ಮೂಲಭೂತ ಸೌಕರ್ಯಗಳ ಆಮೂಲಾಗ್ರ ಸುಧಾರಣೆಗಾಗಿ ಕರ್ನಾಟಕದಲ್ಲಿಯೂ ಎಎಪಿ ಸರ್ಕಾರ ರಚನೆಗಾಗಿ ನಿಮ್ಮಂತಹ ಪ್ರಜ್ಞಾವಂತ-ಪ್ರಾಮಾಣಿಕ ರಾಜಕಾರಣಿಗಳ ಅವಶ್ಯಕತೆ ಇದೆ ಎಂದು ಆಹ್ವಾನ ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!