ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಉದ್ಘಾಟನೆ ಮತ್ತು ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ
ಸುಳ್ಯ: ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಪ್ರಥಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.1 ರಂದು ಎಲ್ ಕೆ ಜಿ ತರಗತಿ ಉದ್ಘಾಟನೆಗೊಂಡಿತು.
ಎಲ್ ಕೆಜಿ ತರಗತಿ ಕೊಠಡಿಯನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯಧಿಕಾರಿ ಶ್ರೀ ಮತಿ ಯು.ಕೆ.ಶೀತಲ್ ಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಉಳುವಾರು ವಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನಂದ ಕಲ್ಲುಗದ್ದೆಯವರು ನೀಡಿದ ನೋಟ್ ಪುಸ್ತಕವನ್ನು ಅವರ ಮಾತೃಶ್ರಿ ಶ್ರೀ ಮತಿ ಚಿನ್ನಮ್ಮ ವಿದ್ಯಾರ್ಥಿಗಳಿಗೆ ವಿತರಿಸಿದರು.ಅರಂತೋಡು ಶಾಲೆಯ ದೈಹಿಕ ಶಿಕ್ಷಕಿ ಸರಸ್ವತಿ ಎಲ್ ಕೆ ಜಿ ಮಕ್ಕಳಿಗೆ ಚಯರ್ ಕೊಡಗೆಯಾಗಿ ನೀಡಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರು ಬಿ.ಇ.ಒ ಶ್ರೀ ಮತಿ ನಳಿನಿ, ಸುಳ್ಯ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕು.ಶ್ವೇತಾ ಅರಮನೆಗಾಯ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ಗಂಗಾಧರ ಬನ ,ಪುಷ್ಪಾಧರ ,ಮಾಲಿನಿ ಉಳುವಾರು ,ದುರ್ಗಾಮಾತ ಭಜನಾ ಮಂಡಳಿ ಅಧ್ಯಕ್ಷ ಕೆ.ಆರ್ ಪದ್ಮನಾಭ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್,ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್,ದೈಹಿಕ ಶಿಕ್ಷಕಿ ಶ್ರೀ ಮತಿ ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು .ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.ವಿದ್ಯಾರ್ಥಿಗಳ ಪೋಷಕರು ಎಸ್ ಡಿ ಎಮ್ ಸಿ ಸರ್ವ ಸದಸ್ಯರು ,ಈ ಸಂದರ್ಭದಲ್ಲಿ ಇದ್ದರು .ಗೋಪಾಲಕೃಷ್ಣ ಬನ ಸ್ವಾಗತಿಸಿ ಶಿಕ್ಷಕಿ ಭಾನುಮತಿ ಕಾರ್ಯಕ್ರಮ ನಿರೂಪಿಸಿದರು .