March 26, 2026

ಧರ್ಮಸ್ಥಳ: ದೇವಸ್ಥಾನದಲ್ಲಿ ಭಕ್ತರ ಬ್ಯಾಗ್ ನಿಂದ ಚಿನ್ನಾಭರಣ ಕಳವು ಪ್ರಕರಣ: ಮಹಿಳೆಯ ಬಂಧನ

0
IMG-20220602-WA0008.jpg

ಧರ್ಮಸ್ಥಳ: ಸೌತಡ್ಕ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊಬ್ಬರ ಬ್ಯಾಗ್ ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ಕುಷ್ಟಗಿಚಾಲ್‌ ಮನೆ ನಿವಾಸಿಯಾದ ಭೀಮವ್ವ (63) ಎಂದು ಗುರುತಿಸಲಾಗಿದೆ.

ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀ ಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಬೆಳ್ತಂಗಡಿ ಮೂಲದ ಮುಂಬೈ ನಿವಾಸಿಯಾದ ಬಾಲಚಂದ್ರ ಡಿ ಎಂಬುವವರು ಸಂಸಾರ ಸಮೇತ ಬಂದಿದ್ದರು. ಈ ವೇಳೆ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ ಬಾಲಚಂದ್ರ ಅವರ ಪತ್ನಿಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ನ ಜಿಪ್ ತೆರೆದು ಅದರಲ್ಲಿದ್ದ ವಜ್ರದ ನೆಕ್ಲೇಸ್‌, ಎರಡು ಉಂಗುರ, ಜುಮುಕಿ ಒಂದು ಜೊತೆ ಸೇರಿ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್‌ ಅಧೀಕ್ಷಕ ಋಷೀಕೇಶ್‌ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಕುಮಾರ್‌ ಚಂದ್ರ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಗದಗ ಮೂಲದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಭೀಮವ್ವ ಅವಳ ಮೇಲೆ ಮುರುಡೇಶ್ವರ, ಭಟ್ಕಳ, ಸುಬ್ರಹ್ಮಣ್ಯ, ಸೇರಿ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್‌ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ಶಿವಂಶು ರಜಪೂತ್‌ ಮತ್ತು ಪೊಲೀಸ್‌ ವೃತ್ತ ನಿರೀಕ್ಷಕರು ಬೆಳ್ತಂಗಡಿ ವೃತ್ತ ಶಿವಕುಮಾರ್‌ ರವರ ನೇತೃತ್ವದಲ್ಲಿ ಪಿಎಸ್ಐ ಕೃಷ್ಣಕಾಂತ ಅ ಪಾಟೀಲ್‌ ರವರ ವಿಶೇಷ ತಂಡದ ಸಿಬ್ಬಂದಿಗಳಾದ, ಹೆಚ್‌ ಸಿ ಬೆನ್ನಿಚ್ಚನ್‌, ಹೆಚ್ ಸಿ ಪ್ರಶಾಂತ್‌, ಹೆಚ್ ಸಿ ರಾಹುಲ್‌, ಹೆಚ್‌ ಸಿ ಸತೀಶನಾಯ್ಕ ಜಿ, ಹೆಚ್‌ ಸಿ ಶೇಖರ್‌ ,ಹೆಚ್‌ ಸಿ ಕೃಷ್ಣಪ್ಪ, ಹೆಚ್‌ಸಿ ರವೀಂದ್ರ ಪಿ ಸಿ ಅನಿಲ್‌ ಕುಮಾರ್‌ ,ಚಾಲಕ ಎಪಿಸಿ ಲೋಕೇಶ್‌, ಮಪಿಸಿ ಸೌಭಾಗ್ಯ ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್‌ ಮತ್ತು ದಿವಾಕರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!