ಐಪಿಎಲ್ 2022 ಫೈನಲ್:
ರಾಜಸ್ಥಾನ್ ರಾಯಲ್ಸ್ ನ್ನು ಮಣಿಸಿ ಟ್ರೋಫಿ ಮುಡಿಗೇರಿಸಿಕೊಂಡ ಗುಜರಾತ್ ಟೈಟಾನ್ಸ್

ಅಹ್ಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಜಯ ಗಳಿಸಿದ್ದು, 2022 ಐಪಿಎಲ್ ಟ್ರೋಫಿ ತನ್ನ ಮುಡಿಗೇರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಕಡಿಮೆ ರನ್ ಗಳಿಸಿದ್ದು, ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 39, ಯಶಸ್ವಿ ಜೈಸ್ವಾಲ್ 22, ಸಂಜು ಸಾಮ್ಸನ್ 14, ರಿಯಾನ್ ಪರಾಗ್ 15, ಶಿಮ್ರೋನ್ ಹಿಟ್ಮೇಯರ್ 11 ರನ್ ಗಳಿಸಿದರೆ ಉಳಿದ ಆಟಗಾರರು ಎರಡಂಕೆಯ ರನ್ ಗಳಿಸಲು ಅಶಕ್ತರಾದರು.
ಇನ್ನು ರಾಜಸ್ಥಾನ್ ರಾಯಲ್ಸ್ ನೀಡಿದ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 18.1 ಓವರುಗಳಲ್ಲಿ 133 ರನ್ ಗಳಿಸಿ 7 ವಿಕೆಟ್ ಗಳ ಗೆಲುವು ಸಾಧಿಸಿತು. ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್ 45*, ಡೇವಿಡ್ ಮಿಲ್ಲರ್ 32*, ಮ್ಯಾಥ್ಯೂ ವೇಡ್ 08, ನಾಯಕ ಹಾರ್ದಿಕ್ ಪಾಂಡ್ಯ 34, ವೃದ್ದಿಮಾನ ಸಹಾ 5 ರನ್ ಗಳಿಸಿದರು. ಇನ್ನು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಗುಜರಾತ್ ಪರ ಹಾರ್ದಿಕ್ ಪಾಂಡ್ಯ 3, ಸಾಯಿ ಕಿಶೋರ್ 2, ರಶೀದ್ ಖಾನ್, ಮೊಹಮ್ಮದ್ ಶಮಿ, ಯಶ್ ದಯಾಲ್ ತಲಾ 1 ವಿಕೆಟ್ ಪಡೆದರು.