ಉಪ್ಪಿನಂಗಡಿ: ಬಸ್ಸಿನಲ್ಲಿ ಅನ್ಯ ಕೋಮಿನ ಯುವಕನಿಂದ ಮಹಿಳೆಗೆ ಕಿರುಕುಳ ಆರೋಪ
ಉಪ್ಪಿನಂಗಡಿ: ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಯುವಕನೊಬ್ಬ ಮಹಿಳಾ ಪ್ರಯಾಣಿಕೆಗೆ ಕಿರುಕುಳ ನೀಡಿದ್ದರಿಂದ ಮನನೊಂದು ಮಹಿಳೆ ನಡು ದಾರಿಯಲ್ಲಿ ಇಳಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ತನ್ನ ಮಗುವಿನ ಜೊತೆಗೆ ಉಪ್ಪಿನಂಗಡಿ ಸಮೀಪದ ತನ್ನ ಸಂಬಂಧಿಕರ ಮನೆಗೆ ಬಂದು ಮತ್ತೆ ಬೆಂಗಳೂರಿಗೆ ಪ್ರಯಾಣಿಸಲೆಂದು ಆಪ್ ಮುಖಾಂತರ ಖಾಸಗಿ ಬಸ್ ನಲ್ಲಿ ಸ್ಲೀಪರ್ ಸೀಟ್ ಬುಕ್ ಮಾಡಿದ್ದರು. ಮಹಿಳೆ ಉಪ್ಪಿನಂಗಡಿಯಲ್ಲಿ ಬಸ್ ಹತ್ತಿದ ವೇಳೆ ಅದ್ಯಾವುದೋ ನಶೆಯಲ್ಲಿದ್ದ ತೂರಾಡುತ್ತಿದ್ದ ಯುವಕನೊಬ್ಬ ಮಹಿಳೆ ಬುಕ್ ಮಾಡಿದ ಸ್ಲೀಪರ್ ಸೀಟ್ ನಲ್ಲಿ ಕುಳಿತ್ತಿದ್ದ ಎನ್ನಲಾಗಿದೆ.
ಈ ವಿಚಾರವನ್ನು ಮಹಿಳೆಯು ಬಸ್ ನ ಚಾಲಕ ಮತ್ತು ನಿರ್ವಾಹಕನ ಗಮನಕ್ಕೆ ತಂದಿದ್ದರು. ನಿರ್ವಾಹಕ ಆ ಯುವಕನನ್ನು ವಿಚಾರಿಸಿದ್ದು, ಈ ಸಂದರ್ಭದಲ್ಲಿ ನಿರ್ವಾಹಕ ಮತ್ತು ಯುವಕನ ನಡುವೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ನಂತರದ ಬೆಳವಣಿಗೆಯಲ್ಲಿ ಮಹಿಳೆ ಅಪಾಯವನ್ನರಿತು ತಕ್ಷಣವೇ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.





