April 12, 2025

ಕಾವಳಕಟ್ಟೆ : ಹಿದಾಯ ವಿಶೇಷ ಶಾಲೆಗೆ ಉಚಿತ ಶಾಲಾ ವಾಹನ ಹಸ್ತಾಂತರ

0

ಬಿ.ಸಿ.ರೋಡ್: ಮೇ.29, ವಿಶೇಷ ಚೇತನ ಮಕ್ಕಳಿಗೆ ಅವಕಾಶ ಮತ್ತು ಸೂಕ್ತ ತರಬೇತಿಯನ್ನು ನೀಡಿದಾಗ ಅಸಾಮಾನ್ಯ ಸಾಧನೆ ಮಾಡಬಲ್ಲರು ಎಂದು ಹಿದಾಯ ಫೌಂಡೇಶನ್ ಟ್ರಸ್ಟ್ ನ ಚೇರ್ಮ್ಯಾನ್ ಮನ್ಸೂರ್ ಅಹಮದ್ ಆಝಾದ್ ಅಭಿಪ್ರಾಯಪಟ್ಟರು.

ಅವರು ಕಾವಳಕಟ್ಟೆ ಯ ಹಿದಾಯ ವಿಶೇಷ ಮಕ್ಕಳ ಶಾಲೆಗೆ ನಾಟೆಕಲ್ ಕುನಿಲ್ ಇಲ್ಮ್ ಅಕಾಡೆಮಿ ಇವರು ಕೊಡುಗೆಯಾಗಿ ನೀಡಿದ ಉಚಿತ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದರು.
ಪ್ರತಿಯೊಂದು ಮಗುವೂ ಕೂಡಾ ವಿಶಿಷ್ಟ ಮತ್ತು ಅನನ್ಯವಾಗಿಯೇ ಹುಟ್ಟುತ್ತದೆ ಆದರೆ ಪರಿಸರದಿಂದ ಸ್ಫೂರ್ತಿ ಪಡೆದ ಮಗು ಸಾಧಕನಾಗಬಲ್ಲುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕುನಿಲ್ ಇಲ್ಮ್ ಅಕಾಡೆಮಿಯ ಅಧ್ಯಕ್ಷ ಫಕ್ರುದ್ದೀನ್, ಉಪಾಧ್ಯಕ್ಷ ಮೊಯ್ದಿನ್ ಕುಂಞಿ, ಕೋಶಾಧಿಕಾರಿ ಆದಿಲ್ ಸೂಫಿ, ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಸ್ಗರ್ , ಕೋಶಾಧಿಕಾರಿ ಎಫ್.ಎಂ.ಬಶೀರ್, ಉಪಾಧ್ಯಕ್ಷ ಆಸಿಫ್ ಇಕ್ಬಾಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

 

ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿ, ಸದಸ್ಯ ಹಕೀಂ ಕಲಾಯಿ ವಂದಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ಸಂಯೋಜಿಸಿದರು.

Leave a Reply

Your email address will not be published. Required fields are marked *

error: Content is protected !!