ಮಾಣಿ: ಆಟೋ ರಿಕ್ಷಾ ಮತ್ತು ಕಾರು ನಡುವೆ ಅಪಘಾತ: ಮಸೀದಿ ಅಧ್ಯಕ್ಷ ಗಂಭೀರ ಗಾಯ

ವಿಟ್ಲ: ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ನಲ್ಲಿ ನಡೆದಿದೆ.
ಮಾಣಿಯಿಂದ ಸೂರಿಕುಮೇರು ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಕಲ್ಲಡ್ಕ ಕಡೆಯಿಂದ ಬರುತ್ತಿದ್ದ ರಿಟ್ಜ್ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಿಂ ರಿಕ್ಷಾ ಚಾಲಕ
ಸೂರಿಕುಮೇರು ಮಸೀದಿ ಅಧ್ಯಕ್ಷ ಮೂಸ ಕರೀಂ ಮಾಣಿ ಅವರಿಗೆ ಗಾಯವಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
