ಡಾಕರ್ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ: 11 ಮಕ್ಕಳು ಮೃತ್ಯು
ಸೆನೆಗಲ್: ಡಾಕರ್ ಬಳಿಯ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್ ಹೇಳಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ. ಘಟನೆ ನೋವು ಮತ್ತು ನಿರಾಶೆ ಮೂಡಿಸಿದೆ’ ಎಂದು ಅಧ್ಯಕ್ಷ ಮ್ಯಾಕಿ ಸಾಲ್ ಅವರು ಟ್ವಿಟ್ ಮಾಡಿ ತಿಳಿಸಿದ್ದಾರೆ.
ಟಿವೌವಾನ್‌ನ ಸಾರಿಗೆ ಕೇಂದ್ರದಲ್ಲಿರುವ ಮಾಮ್ ಅಬ್ದೌ ಅಜೀಜ್ ಸೈ ದಬಾಖ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ. ಬೆಂಕಿ ಅತ್ಯಂತ ವೇಗವಾಗಿ ಆವರಿಸಿತ್ತು’ ಎಂದು ಸೆನೆಗಲ್‌ನ ರಾಜಕೀಯ ನಾಯಕ ಡಿಯೋಪ್ ಸೈ ತಿಳಿಸಿದ್ದಾರೆ. ಘಟನೆಯಲ್ಲಿ ಮೂರು ಶಿಶುಗಳನ್ನು ರಕ್ಷಿಸಲಾಗಿದೆ ಎಂದು ನಗರದ ಮೇಯರ್ ಡೆಂಬಾ ಡಿಯೋಪ್ ಹೇಳಿದ್ದಾರೆ.
ಮೇಮ್ ಅಬ್ದೌ ಅಜೀಜ್ ಸೈ ದಬಾಖ್ ಆಸ್ಪತ್ರೆಯನ್ನು ಇತ್ತೀಚೆಗಷ್ಟೇ ಉದ್ಘಾಟಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.




