ಟಿಕ್ ಟಾಕ್ ಸ್ಟಾರ್ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ
ಶ್ರೀ ನಗರ: ಜಮ್ಮು & ಕಾಶ್ಮೀರದ ಟಿಕ್ಟಾಕ್ ಸ್ಟಾರ್ ಮಹಿಳೆಯೊಬ್ಬರನ್ನು ಉಗ್ರರು ಗುಂಡಿಕ್ಕಿ ಕೊಂದಿರುವ ಘಟನೆ ಬುಧವಾರ ನಡೆದಿದೆ. ಮೃತ ಮಹಿಳೆಯನ್ನು ದೂರದರ್ಶನ ಕಲಾವಿದೆ ಅಮರೀನ್ ಭಟ್ ಎಂದು ಗುರುತಿಸಲಾಗಿದೆ.
ಈಕೆಯ ಮನೆಗೆ ನುಗ್ಗಿದ ಉಗ್ರರು, ಗುಂಡಿಕ್ಕಿ ಆಕೆಯನ್ನು ಕೊಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಆಕೆಯ 10 ವರ್ಷದ ಸಹೋದರ ಸಂಬಂಧಿ ರಾನ್ ಝಬೈರ್ ಕೂಡಾ ಗಾಯಗೊಂಡಿದ್ದಾನೆ.
ಅಮರೀನ್ ಭಟ್ ಸ್ಥಳೀಯ ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಅಮ್ರೀನ್ ಭಟ್ ಗಾಯನ, ಕಿರುಚಿತ್ರದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಮರೀನ್ ದಾಳಿಯಲ್ಲಿ ಗಾಯಗೊಂಡಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇನ್ನೂ ಈಕೆಯೊಂದಿಗೆ ಮನೆಯಲ್ಲಿದ್ದ 10 ವರ್ಷದ ಹೋದರ ಸಂಬಂಧಿ ಕೈಗೆ ಬುಲೆಟ್ ತಗುಲಿ ಗಾಯವಾಗಿದೆ. ಬಾಲಕನ ಸ್ಥಿತಿ ಸ್ಥಿರವಾಗಿದೆ. ಗುಂಡಿನ ದಾಳಿಯ ಬಳಿಕ ಆ ಪ್ರದೇಶಕ್ಕೆ ಬಿಗಿ ಭದ್ರತೆ ನೀಡಲಾಗಿದೆ ಎಂದು ಜಮ್ಮು & ಕಾಶ್ಮೀರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ





