March 25, 2026

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: 1 ಕೋಟಿ ರೂ. ಕಳೆದುಕೊಂಡ ಪೋಸ್ಟ್ ಮಾಸ್ಟರ್

0
image_editor_output_image-592988483-1653458936397.jpg

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಪೋಸ್ಟ್ ಮಾಸ್ಟರ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಬೆಟ್ಟಿಂಗ್ ಗಾಗಿ ಪೋಸ್ಟ್ ಮಾಸ್ಟರ್ 24 ಕುಟುಂಬಗಳ ಠೇವಣಿ ಹಣವನ್ನು ಬಳಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಬಿನಾ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಶಾಲ್ ಅಹಿರ್ವಾರ್ ನನ್ನು ಮೇ 20ರಂದು ಬಿನಾ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್ ಪಿ) ಬಂಧಿಸಿದ್ದಾರೆ. ತನಿಖೆಯ ವೇಳೆ ಈತ ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.

ಆರೋಪಿ ಪೋಸ್ಟ್ ಮಾಸ್ಟರ್ ವಿಶಾಲ್, ನಕಲಿ ಎಫ್ ಡಿ ಖಾತೆಗಳಿಗಾಗಿ ಅಸಲಿ ಪಾಸ್ ಬುಕ್ ಗಳನ್ನು ನೀಡಿದ್ದು, ಕಳೆದ ಎರಡು ವರ್ಷಗಳಲ್ಲಿ 24 ಕುಟುಂಬಗಳ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣವನ್ನು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹೂಡಿ ಕಳೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!