September 26, 2026

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ ಬೆಂಕಿ, 9 ಅತಿಥಿ ಗುಡಿಸಲುಗಳು   ಭಸ್ಮ

0
image_editor_output_image-728314109-1653458245101.jpg

ಗಂಗಾವತಿ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತಾಲ್ಲೂಕಿನ ಆನೆಗೊಂದಿ ಬಳಿ ಇರುವ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ ಬೆಂಕಿ ಹೊತ್ತಿಕೊಂಡು 9 ಅತಿಥಿ  ಗುಡಿಸಲುಗಳು ಬೆಂಕಿಗೆ  ಭಸ್ಮವಾಗಿವೆ

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ .ಆರ್. ಶ್ರೀನಾಥ್ ಒಡೆತನದ ದುರ್ಗಾ ಪ್ಯಾರಡೈಸ್ ರೆಸಾರ್ಟ್, ಆನೆಗೊಂದಿ ಹೊರವಲಯದಲ್ಲಿದ್ದು ಮಂಗಳವಾರ ರಾತ್ರಿ ರೆಸಾರ್ಟ್ ಬಂದ್ ಮಾಡಿದ ನಂತರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ.

 

ಇದರಿಂದ ರೆಸಾರ್ಟ್ ನ 9 ಗುಡಿಸಲುಗಳು ಸುಟ್ಟು ಹೋಗಿವೆ .ಕೂಡಲೇ ಅಗ್ನಿ ಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ರವಾನೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಯವರು ತಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!