March 25, 2026

ಮಲ್ಪೆ: ಮನೆಯಿಂದ ಆಟ ಆಡಲು ಹೊರ ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಮೃತ್ಯು

0
image_editor_output_image-69621494-1653283349452.webp

ಮಲ್ಪೆ: ಮನೆಯಿಂದ ಆಟ ಆಡಲು ಹೊರ ಹೋಗಿದ್ದ ಬಾಲಕನೋರ್ವ ಅಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಎಂಬಲ್ಲಿ ಮೇ.21ರಂದು ಸಂಜೆ ವೇಳೆ ಕಡೆಕಾರ್ ಕೆರೆಮಠ ಭಜನಾ ಮಂದಿರ ಬಳಿ ನಡೆದಿದೆ.

ಮೃತರನ್ನು ಕಡೆಕಾರಿನ ಗಿರೀಶ್ ಉಪಾಧ್ಯಾಯ ಎಂಬವರ ಮಗ ರಾಘವ (8) ಎಂದು ಗುರುತಿಸಲಾಗಿದೆ.

ಬಾಲಕ ಕಿದಿಯೂರಿನ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿಯಾಗಿದ್ದ. ಶನಿವಾರ ರಾಘವ ಶಾಲೆಯಿಂದ ಬಂದ ಬಳಿಕ ಕೆರೆಮಠದ ಸಮೀಪ ಜಾರು ಬಂಡಿ ಆಟ ಆಡಲು ಹೋಗಿದ್ದನು. ಈ ವೇಳೆ ಈತ ಹತ್ತಿರದ ಕೆರೆಯಲ್ಲಿ ಅಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ.

ರಾತ್ರಿಯಾದರೂ ಮನೆಗೆ ಬಾರದ ರಾಘವನನ್ನು ಹುಡುಕಾಡಿದಾಗ ಮೇ 22ರಂದು ಹುಡುಕಾಡಿದಾಗ ಕೆರೆಯ ಹತ್ತಿರ ಚಪ್ಪಲಿ ಪತ್ತೆಯಾಯಿತು. ಬಳಿಕ ಮಲ್ಪೆಯ ಮುಳುಗು ತಜ್ಞ ಈಶ್ವರ ಮಲ್ಪೆ ಕೆರೆಯಲ್ಲಿ ಹುಡುಕಾಡಿದಾಗ ಬೆಳಗ್ಗೆ 10.30ರ ಸುಮಾರಿಗೆ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!