July 5, 2026

ಹಿರೇಬೆಟ್ಟುವಿನ ದೇವಸ್ಥಾನದ ಪೂಜಾ ವಸ್ತುಗಳ ಕಳವು: ಆರೋಪಿ ಭಾಸ್ಕರ ಶೆಟ್ಟಿ ಬಂಧನ

0
image_editor_output_image152255248-1653128761906.jpg

ಉಡುಪಿ: ಹಿರೇಬೆಟ್ಟುವಿನ ದೇವಸ್ಥಾನವೊಂದರಲ್ಲಿ ದೇವರ ಪೂಜಾ ಸಂಬಂಧಿಸಿದ ವಸ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಹಿರೇಬೆಟ್ಟು ನಿವಾಸಿ ಭಾಸ್ಕರ ಶೆಟ್ಟಿ (49) ಬಂಧಿತ ಆರೋಪಿ. ಪಂಚಲೋಹದ ಪ್ರತಿರೂಪ, ಆರತಿ ತಟ್ಟೆ, ಹಿತ್ತಾಳೆ ವಸ್ತುಗಳು ಮತ್ತು ಬೀಡು ಮನೆಬಲಕಟ್ಟು ದೇವಳದ ಗಂಟೆಯನ್ನು ಈತ ಕಳವುಗೈದಿದ್ದ. ಎಲ್ಲಾ ವಸ್ತುಗಳು ಸೇರಿ ಒಟ್ಟು 50, 000 ರೂ. ಬೆಲೆ ಬಾಳುವಂತದ್ದಾಗಿವೆ.

ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ದಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!