ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ
ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿದ ಮಹಿಳೆ ಸೇರಿದಂತೆ ಇಬ್ಬರು ಗೃಹಿಣಿಗೆ ಚಾಕು ತೋರಿಸಿ ಬೆದರಿಸಿ ದರೋಡೆಗೈದ ಘಟನೆ ಉಪ್ಪಳ ಶಾಲೆಯ ಬಳಿಯಿರುವ ಅಂಚಿಕಟ್ಟೆಯ ಬಶೀರ್ ಎಂಬವರ ಮನೆಯಲ್ಲಿ ನಡೆದಿದೆ.

ಸ್ಕೂಟರ್‌ನಲ್ಲಿ ಬಂದ ಇಬ್ಬರು ಮನೆಯೊಳಗೆ ನುಗ್ಗಿ ಚಾಕು ತೋರಿಸಿದ್ದು, ಎಲ್ಲಾ ಚಿನ್ನಾಭರಣವನ್ನು ನೀಡುವಂತೆ ಬೆದರಿಸಿದ್ದಾರೆ. ಭಯಗೊಂಡ ಗೃಹಿಣಿ ಕೈಯಲ್ಲಿ ಬಳೆಯನ್ನು ತೆಗೆದು ನೀಡಿದ್ದು ಸುಮಾರು ಒಂದೂ ಕಾಲು ಪವನ್‌ನ ಚಿನ್ನದ ಬಳಕೆಯನ್ನು ದರೋಡೆಗೈದಿದ್ದಾರೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಪುತ್ರ ಮಸೀದಿಗೆ ತೆರಳಲೆಂದು ಕೆಳಗೆ ಬಂದಾಗ ಇಬ್ಬರೂ ಚಿನ್ನಾಭರಣ ಸಹಿತ ಪರಾರಿಯಾಗಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.




