ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್: ಮೂವರು ಮೃತ್ಯು, 11 ಮಂದಿಗೆ ಗಾಯ
ಚಂಡೀಗಢ: ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ಕೊಂದು ಹರಿದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಹರಿಯಾಣದ ಜಜ್ಜರ್ ಬಳಿ ಸಂಭವಿಸಿದೆ.
ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ 10 ಮಂದಿನ್ನು ಚಿಕಿತ್ಸೆಗಾಗಿ ರೋಹ್ಟಕ್‌ನ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ (ಪಿಜಿಐಎಂಎಸ್) ಕಳುಹಿಸಲಾಗಿದ್ದು, ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಬಹದ್ದೂರ್‌ಗಢ್‌ನ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ.
ಸಾವನ್ನಪ್ಪಿದ ಮೂವರು ಮತ್ತು 11 ಮಂದಿ ಗಾಯಗೊಂಡವರು ಕೆಎಂಪಿ ಎಕ್ಸ್‌ಪ್ರೆಸ್ ವೇಯಲ್ಲಿ ದುರಸ್ತಿ ಕೆಲಸ ಮಾಡುವವರು.
ಕೆಲಸ ಮುಗಿಸಿದ ಬಳಿಕ ಕಾರ್ಮಿಕರು ರಸ್ತೆ ಬದಿ ಮಲಗಿದ್ದರು. ಈ ವೇಳೆ ಅತೀ ವೇಗದಲ್ಲಿ ಬಂದ ಲಾರಿಯೊಂದು ನಿದ್ರಿಸುತ್ತಿದ್ದ ಕಾರ್ಮಿಕರಿಗೆ ಮೇಲೆ ಹರಿದಿದೆ.




