March 19, 2026

ಮಲ್ಪೆ: ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ, ವಿದೇಶಿ ಮೂಲದ ದಂಪತಿ ಸಹಿತ ಮೂವರಿಗೆ ಗಾಯ

0
image_editor_output_image474984711-1652938395933.jpg

ಮಲ್ಪೆ: ಮಲ್ಪೆ ಸಿಟಿಜನ್ ಸರ್ಕಲ್ ಬಳಿ ಟ್ಯಾಂಕರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದೇಶಿ ಮೂಲದ ದಂಪತಿ ಸಹಿತ ಮೂವರು ಗಾಯಗೊಂಡ ಘಟನೆ ಮೇ 18ರ ಬುಧವಾರ ನಡೆದಿದೆ.

ಗಾಯಗೊಂಡವರನ್ನು ಫ್ರಾನ್ಸ್ ದೇಶದ ಗ್ರೆಗೊರ್ ರಿಕೋನೊ(35) ಹಾಗೂ ಅವರ ಪತ್ನಿ ಮಾರ್ಗೊಟ್ ಕ್ವಿಝ್‌ನೆಲ್(30) ಮತ್ತು ರಿಕ್ಷಾ ಚಾಲಕ ಆತ್ರಾಡಿಯ ಪ್ರಜ್ವಲ್ ನಾಯ್ಕ ಎಂದು ಗುರುತಿಸಲಾಗಿದೆ.

ಮದುವೆ ಸಮಾರಂಭಕ್ಕಾಗಿ ಭಾರತಕ್ಕೆ ಬಂದಿದ್ದ ದಂಪತಿ, ಮಣಿಪಾಲದಿಂದ ರಿಕ್ಷಾದಲ್ಲಿ ಮಲ್ಪೆ ಬೀಚ್‌ಗೆ ಬರುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ನೀರು ಸರಬರಾಜು ಮಾಡುವ ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ರಿಕ್ಷಾದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ಈಶ್ವರ ಮಲ್ಪೆ ಅವರು ತಕ್ಷಣ ಸ್ಪಂದಿಸಿ ಗಾಯಾಳುಗಳನ್ನು ಆಸ್ಪತೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!