March 19, 2026

ಬೆಳ್ತಂಗಡಿ: ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ: ಆರೋಪಿಯ ಬಂಧನ

0
arrest.jpg

ಬೆಳ್ತಂಗಡಿ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ವಿನಯ್‌(23) ಎನ್ನಲಾಗಿದೆ.

ಮೇ.18 ರಂದು ಧರ್ಮಸ್ಥಳ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಕೃಷ್ಣಕಾಂತ ಪಾಟೀಲ್‌ ಮತ್ತು ಸಿಬ್ಬಂದಿಗಳು ರೌಂಡ್ಸ್‌ ಕರ್ತವ್ಯದಲ್ಲಿ ಇರುವ ಸಮಯ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಚಾರ್ಮಾಡಿ ಪೊಲೀಸ್‌ ಚೆಕ್‌ ಪೋಸ್ಟ್‌ ಬಳಿ ವಾಹನವನ್ನು ತಪಾಸಣೆ ಮಾಡುತ್ತಿರುವ ಸಮಯ ಉಜಿರೆ ಕಡೆಯಿಂದ ಮೂಡಿಗೆರೆ ಕಡೆಗೆ ಹೋಗುವ ಬೋಲೆರೋ ಪಿಕಪ್ ಅನ್ನು ತಡೆದು ನಿಲ್ಲಿಸಿ ಸದ್ರಿ ಬೋಲೆರೋ ವಾಹನ ಚಾಲಕನನ್ನು ಎನಿದೆ ಎಂದು ಕೇಳಿದಾಗ ಅನ್ನಭಾಗ್ಯ ಅಕ್ಕಿ ಇರುವುದಾಗಿ ತಿಳಿಸಿದ್ದು ಈ ಬಗ್ಗೆ ಯಾವುದಾದರೂ ಪರವಾನಿಗೆ ಇದೆ ಎಂದು ಕೇಳಿದಾಗ ಯಾವುದೇ ರೀತಿಯ ದಾಖಲಾತಿಗಳನ್ನು ನೀಡಿರುವುದಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ತಾಲೂಕು ಆಹಾರ ನೀರೀಕ್ಷಕರು ಬೆಳ್ತಂಗಡಿ ತಾಲೂಕು ರವರಿಗೆ ದೂರವಾಣಿ ಮೂಲಕ ವಿಚಾರವನ್ನು ತಿಳಿಸಿದ್ದು ನಂತರ ಸ್ಥಳಕ್ಕೆ ಎರಡು ಜನ ಪಂಚರನ್ನು ಬರಮಾಡಿಕೊಂಡು ಆಹಾರ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿಯಾದ ನಾರಾಯಣ ಕುಲಾಲ್‌ ಎಂಬವರಿಗೆ ವಾಹನದಲ್ಲಿ ಇರುವ ಅಕ್ಕಿಯನ್ನು ಪರೀಶಿಲಿಸುವಂತೆ ತಿಳಿಸಿದಾಗ ವಾಹನವನ್ನು ಪರಿಶೀಲಿಸಲಾಗಿ ಸದ್ರಿ ಅಕ್ಕಿಯು 2022ನೇ ಮೇ ತಿಂಗಳ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಯ ಸರಬರಾಜು ನೀಡಿರುವ ಅಕ್ಕಿಗೆ ಹೋಲಿಕೆ ಇರುವುದು ಕಂಡುಬಂದಿದ್ದು, ವಾಹನದಲ್ಲಿ 59 ಪ್ಲಾಸ್ಟಿಕ್‌ ಗೋಣಿಚೀಲಗಳಲ್ಲಿ ತಲಾ 50 ಕೆ ಜಿ ಅಕ್ಕಿ ತುಂಬಿದ ಅಕ್ಕಿ ಮತ್ತು 14 ಪ್ಲಾಸ್ಟಿಕ್‌ ಗೋಣಿ ಚೀಲಗಳಲ್ಲಿ ತಲಾ 25 ಕೆ ಜಿ ತುಂಬಿದ ಅಕ್ಕಿಯಂತೆ ಒಟ್ಟು 33 ಕ್ವಿಂಟಾಲ್‌ ಅಕ್ಕಿ ಪತ್ತೆಯಾಗಿದ್ದು ಸದ್ರಿ ಪತ್ತೆಯಾದ ಅಕ್ಕಿಯ ಅಂದಾಜು ಮೌಲ್ಯ 49500 ರೂಪಾಯಿ ಹಾಗೂ ಸಾಗಾಟಕ್ಕೆ ಬಳಸಿದ ಬೋಲೆರೋ ಪಿಕಫ್‌ ನ ಮೌಲ್ಯ 500000 ರೂ ಮೌಲ್ಯ ಆಗಿದ್ದು, ಸದ್ರಿ ಅಕ್ಕಿಯನ್ನು ಅಕ್ರಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯಲಾಗಿದ್ದು, ಆದುದರಿಂದ ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಚಾಲಕನನ್ನು ಹಾಗೂ ಸೊತ್ತುಗಳನ್ನು ಮತ್ತು ವಾಹನವನ್ನು ಠಾಣೆಗೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಠಾಣೆಯಲ್ಲಿ ಅ .ಕ್ರ 40-2022 ಕಲಂ : 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ 1955 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!