March 21, 2026

ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಶಾಲೆಯ ಮೇಲ್ಛಾವಣಿ ಕುಸಿತ

0
Screenshot_20220517-200346_Chrome.jpg

ಉಳ್ಳಾಲ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಟ್ಟಡ ಕುಸಿದುಬಿದ್ದಿದೆ. ಕಿನ್ಯಾ ಬೆಳರಿಂಗೆ ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ‌ ಕುಸಿದುಬಿದ್ದಿದೆ. ಸಮೀಪದಲ್ಲೇ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ತರಗತಿಗಳು ನಡೆಯುತ್ತಿದ್ದುದರಿಂದ ತರಗತಿ ನಡೆಸಲು ಅಡಚಣೆಯಾಗಿಲ್ಲ.

ಘಟನಾ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್, ಶಿಕ್ಷಣಾ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಮುಖ್ಯಸ್ಥರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಿನ್ಯ ಬೆಳರಿಂಗೆ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 25 ವರ್ಷಕ್ಕೂ ಹಳೆ ಕಟ್ಟಡ ಕಳೆದ ಎರಡು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಶಾಲೆಗೆ ನೂತನ ತರಗತಿ ಕೊಠಡಿ ನಿರ್ಮಾಣ ಕಾರ್ಯ ಮುಗಿದು ಮುಂದಿನವಾರ ಉದ್ಘಾಟನೆಗೊಳ್ಳಲಿದೆ. ಈ ನಡುವೆ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಜಿಲ್ಲಾ ಪಂಚಾಯತ್ ಮತ್ತು ಶಿಕ್ಷಣ ಇಲಾಖೆಗೆ ಶಾಲಾಭಿವೃದ್ಧಿ ಸಮಿತಿ ಮನವಿ ಸಲ್ಲಿಸಿತ್ತು. ಈ ಕಟ್ಟಡದಲ್ಲಿ ಒಟ್ಟು ಐದು ತರಗತಿಗಳಿದ್ದು, 2020ರ ಬಳಿಕ ಈ ಕಟ್ಟಡದಲ್ಲಿ ತರಗತಿಯನ್ನು ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಬಳಿಕ 2021ರಲ್ಲಿ ಶಾಲಾ ಪ್ರಾರಂಭದ ಸಂದರ್ಭದಲ್ಲಿ ಮೂರು ತರಗತಿಗಳ ವಿದ್ಯಾರ್ಥಿಗಳನ್ನು ಸ್ಥಳೀಯ ಮದರಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದೀಗ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಸೋಮವಾರ ರಾತ್ರಿ ಸುರಿದ ಮಳೆಗೆ ಛಾವಣಿ ಮುರಿದು ಬಿದ್ದಿದ್ದು, ರಾತ್ರಿ ಘಟನೆ ನಡೆದ ಕಾರಣ ವಿದ್ಯಾರ್ಥಿಗಳು ಅಪಾಯದಿಂದ ಪಾರಾದಂತಾಗಿದೆ.

Leave a Reply

Your email address will not be published. Required fields are marked *

error: Content is protected !!