March 21, 2026

ಗೋಳಿತ್ತೊಟ್ಟು ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

0
IMG-20220517-WA0038.jpg

ಗೋಳಿತ್ತೊಟ್ಟು: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ಶೈಕ್ಷಣಿಕ ವರ್ಷಕ್ಕೆ ಸಂಭ್ರಮದ ಚಾಲನೆಯನ್ನು ನೀಡಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ ದಾಖಲಾದ ಮಕ್ಕಳನ್ನು ಕಲಿಕೆಗೆ ಬಣ್ಣ ಹಚ್ಚೋಣ ಬನ್ನಿ ಉದ್ಘೋಷದೊಂದಿಗೆ ಬಣ್ಣ ಹಚ್ಚುವ ಪರಿಕರಗಳನ್ನು ಉಡುಗೋರೆಯಾಗಿ ನೀಡುವ ಮೂಲಕ ಶಾಲೆಗೆ ಬರಮಾಡಿಕೊಳ್ಳುವುದರೊಂದಿಗೆ, ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿತಿಂಡಿಯನ್ನು ನೀಡಿ ಶಾಲೆಗೆ ಸ್ವಾಗತಿಸಲಾಯಿತು. ಪ್ರಾರಂಭದಲ್ಲಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳನ್ನು ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕರ್ಷಕ ಮೆರವಣಿಗೆಯ ಮೂಲಕ ಶಾಲಾರಂಭಕ್ಕೆ ಚಾಲನೆ ನೀಡಲಾಯಿತು. ತದನಂತರ ನಡೆದ ಪೋಷಕರ ಸಭೆಯಲ್ಲಿ ಶಾಲೆಯ ನೂತನ ಮುಖ್ಯ ಗುರುಗಳಾದ ಶ್ರೀಮತಿ ಜಯಂತಿ ಬಿ.ಎಂ.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಆಗಮಿಸಿದ ಸರ್ವರನ್ನೂ ಸ್ವಾಗತಿಸಿ ಶೈಕ್ಷಣಿಕ ವರ್ಷಕ್ಕೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಗೋಪಾಲ ಗೌಡ ರವರು ಪೋಷಕರನ್ನುದ್ದೇಶಿಸಿ ಮಾತನಾಡಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರ ಸಹಾಕರವನ್ನು ಕೋರಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕಳೆದ ಎರಡು ಶೈಕ್ಷಣಿಕ ಅವಧಿಗಳಲ್ಲಿ ಕೊರೋನಾ ಕಾರಣದಿಂದ ಕುಂಠಿತಗೊಂಡಿದ್ದ ಕಲಿಕೆಯನ್ನು ಸರಿದೂಗಿಸುವ ಸಲುವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಸರಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಕಲಿಕಾ ಚೇತರಿಕೆ ಕಾರ್ಯಕ್ರಮದ ಕುರಿತು ಶಾಲಾ ಶಿಕ್ಷಕ ಅಬ್ದುಲ್ ಲತೀಫ್.ಸಿ, ಹಾಗೂ ನಲಿಕಲಿ ವಿದ್ಯಾ ಪ್ರವೇಶ ದ ಕುರಿತು ಸಹಶಿಕ್ಷಕಿ ಶ್ರೀಮತಿ ತೇಜಸ್ವಿ ಅಂಬೆಕಲ್ಲು ರವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಯ ಉಪಾಧ್ಯಕ್ಷರಾದ ಶ್ರೀಮತಿ ಆಯಿಶ, ಸದಸ್ಯರಾದ ಶ್ರೀ ಬೈಜು ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ.ಸದಸ್ಯರು, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸಹಕರಿಸಿದರು. ಕೊನೆಯಲ್ಲಿ ಶಾಲಾ ಸಹಶಿಕ್ಷಕಿ ಶ್ರೀಮತಿ ಸೀಮಾ ರವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!