ವಿಟ್ಲ: ಇತ್ತಂಡದ ನಡುವೆ ಘರ್ಷಣೆ ಪ್ರಕರಣ: ಇತ್ತಂಡದ ಒಟ್ಟು 13 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
ವಿಟ್ಲ: ಕೇಪು ಗ್ರಾಮದ ಮೈರ ಎಂಬಲ್ಲಿ ನಡೆದ ಎರಡು ತಂಡಗಳ ನಡುವೆ ಘರ್ಷಣೆಗೆ ಸಂಬಂಧಿಸಿ ಇತ್ತಂಡದದವರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಪರಸ್ಪರ ದೂರು ಪ್ರತಿದೂರು ನೀಡಿದ್ದು, ಇತ್ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ ಕುಂಞಪಾದೆ ನಿವಾಸಿ ಗಿರೀಶ್ (33) ಅವರು ನೀಡಿದ ದೂರಿನಂತೆ ಆರೋಪಿಗಳಾದ ಸಾದೀಕ್, ಜಾಬೀರ್, ಅಶ್ರಫ್, ಜುಬೈರ್ ಹಾಗೂ ಇತರ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಪು ನಿವಾಸಿ ಗಿರೀಶ್ ಅವರು ಕೆಲಸ ಮುಗಿಸಿ ತನ್ನ ಆಟೋ ರಿಕ್ಷಾ ದಲ್ಲಿ ಮೈರಾ ಗೆ ಹೋಗುತ್ತಿದ್ದಾಗ ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಎರಡು ಕಾರುಗಳು ನಿಂತಿದ್ದು, ಗಿರೀಶ್ ಅವರ ಪರಿಚಯದ ರಕ್ಷೀತ್ ಕುಮಾರ್ ಎಂಬವರಿಗೆ ಹಲ್ಲೆ ಮಾಡುತ್ತಿದ್ದು, ಇದನ್ನು ಕಂಡು ಗಿರೀಶ್ ಅವರು ಕರವೀರ ಬಸ್ ನಿಲ್ದಾಣದ ಬಳಿ ಹೋಗಿ ಹಲ್ಲೆ ಮಾಡುತ್ತಿರುವುದನ್ನು ತಡೆಯಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲೆಗೆ ಹೊಡೆದು, ನಂತರ ಅಲ್ಲಿದ್ದ ಜಾಬೀರ್ ಎಂಬಾತನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷೀತ್ ಕುಮಾರ್ ನ ತಲೆಗೆ, ಅಶ್ರಫ್ ಎಂಬಾತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ರಕ್ಷೀತ್ ಕುಮಾರ್ ನ ತಲೆಯ ಹಿಂಬದಿಗೆ ಮತ್ತು ಜುಬೈರ್ ನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷೀತ್ ಕುಮಾರ್ ನಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಗಿರೀಶ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೊಳಗಾದ ರಕ್ಷೀತ್ ಕುಮಾರ್ ನ ತಲೆಯ ಹಿಂಬದಿಗೆ ,ಕಣ್ಣಿನ ಭಾಗಕ್ಕೆ ತೀವ್ರ ತರಹದ ರಕ್ತಗಾಯವಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮತ್ತೊಂದು ಪ್ರಕರಣ ದಾಖಲು: ಮಡಿಕೇರಿಯ ಸೋಮವಾರ ಪೇಟೆ ನಿವಾಸಿ ಮಹಮ್ಮದ್ ಶರೀಫ್ ಅವರು ನೀಡಿದ ದೂರಿನಂತೆ
ಗಣೇಶ್ , ಕಿರಣ್,ಹಾಗೂ ಇತರ 3 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಶರೀಫ್ ಅವರು ಲಾರಿಯಲ್ಲಿ ಕಾಸರಗೋಡುನಲ್ಲಿನ ಗ್ರಾನೈಟ್ ಕೆಲಸ ಮುಗಿಸಿಕೊಂಡು ನಂತರದಲ್ಲಿ ಪ್ಲೇವುಡ್ ಲೋಡ್ ಮಾಡಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ರಾತ್ರಿ 11-45 ಗಂಟೆಗೆ ತಾಲೂಕು ಕೇಪು ಗ್ರಾಮದ ಕುದ್ದುಪದವು ಜಂಕ್ಷನ್ ತಲುಪಿ ಲಾರಿ ಹಾರ್ನ್ ಮಾಡಿದಾಗ ಅಲ್ಲೇ ಇದ್ದ ಸುಮಾರು 6 ಜನರ ಗುಂಪೊಂದು ಕುದ್ದುಪದವುನಿಂದ ಸ್ವಲ್ಪ ಮುಂದೆ ಲಾರಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಪರಿಚಯದ ಗಣೇಶನು ಹಾಗೂ ಕಿರಣನು ಶರೀಫ್ ಗೆ ಹಲ್ಲೆ ಮಾಡಿ ನಂತರ ಶರೀಫ್ ನ ಅಕ್ಕನ ಮಗ ಸಾಧಿಕ್ ಕಾರಿನಲ್ಲಿ ಬಂದಿದ್ದು, ಶರೀಫ್ ನನ್ನು ನೋಡಿ ಅವರ ಬಳಿ ಹೋದಾಗ ಅಲ್ಲಿದ್ದ ಗಣೇಶನು ತನ್ನ ಕೈಯಲ್ಲಿದ್ದ ಸ್ಟೀಲ್ ರಾಡ್ ನಿಂದ ಕಾರಿನ ಮುಂಭಾಗದ ಗ್ಲಾಸ್ ಒಡೆದು ಜಖಂ ಮಾಡಿದ್ದಾನೆ. ಕಿರಣ್ ಎಂಬಾತನು ಸಾಧಿಕನ ಬೆನ್ನಿಗೆ ಹೊಡೆದಿದ್ದರು. ಸಾಧಿಕನು ಹೆದರಿ ಅಲ್ಲಿಂದ ಲಾರಿಯನ್ನು ಚಲಾಯಿಸಿಕೊಂಡು ವಿಟ್ಲ ಕಡೆಗೆ ಹೋದಾಗ ಮತ್ತೆ ಮೂರು ಜನ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಕೇಪು ಗ್ರಾಮದ ಕಲ್ಲಂಗಳ ಬಸ್ ನಿಲ್ದಾಣದ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಲಾರಿಯ ಒಳಗಡೆ ಬಂದು ಗಣೇಶನು ತನ್ನ ಕೈಯಲ್ಲಿದ್ದ ಸ್ಟೀಲ್ ರಾಡ್ ನಿಂದ ಶರೀಫ್ ಅವರ ಎದೆಗೆ ಮತ್ತು ಬಲಕೈಗೆ ಹೊಡೆದು ಮತ್ತೊಬ್ಬ ಕಿರಣ್ ಎಂಬಾತ ಲಾರಿಯ ಒಳಗೆ ಬಂದು ತನ್ನ ಕೈಯಲ್ಲಿದ್ದ ಕೋಳಿ ಬಾಲ್ ನಿಂದ ಎದೆಗೆ ಚುಚ್ಚಿದ್ದು ಮತ್ತೊಬ್ಬ ಕಾಲಿನಿಂದ ತುಳಿದಿದ್ದಾನೆ ಮತ್ತು ಶರೀಪ್ ಅವರಲ್ಲಿದ್ದ 27,000 ಹಣವನ್ನು ಕಳವುಗೈದಿದ್ದಾರೆ ಎಂದು ಶರೀಪ್ ದೂರಿನಲ್ಲಿ ತಿಳಿಸಿದ್ದಾರೆ.
ಶರೀಫ್ ಮತ್ತು ಆತನ ಅಕ್ಕನ ಮಗ ಸಾಧಿಕನುಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




