February 2, 2026

ಪುಂಜಾಲಕಟ್ಟೆ: ಅಕ್ರಮ ದನ ಸಾಗಾಟ ತಡೆಯಲು ಹೋದ ಪೊಲೀಸರ ಮೇಲೆ ವಾಹನ ನುಗ್ಗಿಸಲು ಯತ್ನ: ಎಸೈಗೆ ಗಾಯ

0
image_editor_output_image1414494266-1652584432167

ಪುಂಜಾಲಕಟ್ಟೆ: ಅಕ್ರಮವಾಗಿ ದನ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿ ಕೊಲ್ಲಲು ಪ್ರಯತ್ನ ಮಾಡಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಮುಂಜಾನೆ ವೇಳೆ ನಡೆದಿದೆ.

ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಪುಂಜಾಲಕಟ್ಟೆ ಎಸ್. ಐ.ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ.
ರಾತ್ರಿ ವೇಳೆ ರೌಂಡ್ಸ್ ನಲ್ಲಿದ್ದ ಎಸ್‌ಐ.ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಚಾಲಕ ವಾಹನ ನಿಲ್ಲಿಸದೆ ಎಸ್.ಐ.ಮೇಲೆ ನುಗ್ಗಿಸಲು ಯತ್ನಿಸಿದ.
ಘಟನೆಯಿಂದ ಎಸ್.ಐ.ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ವಾಹನದಲ್ಲಿ ಇಬ್ಬರು ಆರೋಪಿಗಳು ಇದ್ದು, ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ವಾಹನದಲ್ಲಿ ಮೂರು ದನಗಳಿದ್ದು , ಒಂದು ದನ ಹಾಲು ಕೊಡುವುದು ಇನ್ನೊಂದು ಗಬ್ಬದ ದನ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ರಾತ್ರಿ ವೇಳೆ ಆರೋಪಿಗಳು ಹಟ್ಟಿಯಿಂದ ಕಳ್ಳತನ ಮಾಡಿ ತಂದಿರುವ ದನಗಳಾಗಿರಬೇಕು ಎಂಬ ಸಂಶಯ ಇದೆ ಎಂಬ ಮಾಹಿತಿ ಪೋಲೀಸರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!