February 2, 2026

ರಷ್ಯಾ ಮೂಲದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಗದಗ ವ್ಯಕ್ತಿ ಬಂಧನ

0
arrest.jpg

ಗದಗ: ಉತ್ತರ ಗೋವಾದಲ್ಲಿರುವ ಅರಂಬೋಳ್ ರೆಸಾರ್ಟ್ ‌ನಲ್ಲಿ ರಷ್ಯಾ ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಕರ್ನಾಟಕದ ಗದಗ ಜಿಲ್ಲೆ ಮಜ್ಜೂರ ತಾಂಡಾದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.

ಮೇ. 6 ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿದ್ದು, ಸಂತ್ರಸ್ತೆಯ ತಾಯಿ ಮೇ. 9 ರಂದ ದೂರು ನೀಡಿದ್ದರು. ಪೆರ್ನೇಮ್ ‌ ಪೊಲೀಸರು ಆರೋಪಿ ರವಿ ಲಮಾಣಿ (28) ಯನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆತನ ಹುಟ್ಟೂರು ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ.

ರೆಸಾರ್ಟ್ ‌ನಲ್ಲಿ ರೂಮ್ ‌ಅಟೆಂಡರ್ ‌ಆಗಿದ್ದ ಆರೋಪಿ ರವಿ, ಸಂತ್ರಸ್ತೆಯ ತಾಯಿ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹತ್ತಿರದ ಅರಂಬೋಳ್ ‌ಮಾರುಕಟ್ಟೆಗೆ ಹೋಗಿದ್ದಾಗ ರೂಮ್ ಗೆ ನುಗ್ಗಿದ್ದ. ಈ ವೇಳೆ ರೆಸಾರ್ಟ್ ನ ಈಜುಕೊಳ ಮತ್ತು ಕೊಠಡಿಯ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ಆರೋಪಿ ತವರೂರಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!