February 2, 2026

ಟಿಫಿನ್ ಬಾಕ್ಸ್ ಸ್ಫೋಟ: 17 ವರ್ಷದ ಬಾಲಕ ಮೃತ್ಯು

0
Screenshot_2022-05-14-18-27-14-08_680d03679600f7af0b4c700c6b270fe7.jpg

ಕೋಲ್ಕತ್ತಾ: ಸ್ಟೀಲ್ ಟಿಫಿನ್ ಬಾಕ್ಸ್ ಸ್ಫೋಟಗೊಂಡು17 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೋಲ್ಕತ್ತಾ ಬಳಿ ನಡೆದಿದೆ.

ಶೇಖ್ ಸಾಹಿಲ್ ಮೃತಪಟ್ಟ ಬಾಲಕ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ರಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕನ ಅಜ್ಜ ಅಬ್ದುಲ್ ಹಮೀದ್ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಅಜ್ಜ ಸಂಗ್ರಹಿಸಿದ್ದ ಟಿಫಿನ್ ಬಾಕ್ಸ್‌ನ್ನು ಈತ ತೆರೆದಿದ್ದಾನೆ. ಈ ವೇಳೆ ಬಾಕ್ಸ್ ಸ್ಪೋಟಗೊಂಡಿದೆ.

ಸ್ಪೋಟದಿಂದ ಗಂಭೀರ ಗಾಯಗೊಂಡಿದ್ದ ಬಾಲಕನನ್ನು ತತ್‌ಕ್ಷಣ ಬ್ಯಾರಕ್‌ಪೋರ್‌ನಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!