March 21, 2026

ಫ್ಲಿಪ್‌ ಕಾರ್ಟ್‌ ಕಸ್ಟಮರ್‌ ಕೇರ್‌ ಸಿಬ್ಬಂದಿ ಎಂದು ನಂಬಿಸಿ ಮಹಿಳೆಗೆ ವಂಚನೆ

0
Screenshot_2022-05-14-11-02-27-38_680d03679600f7af0b4c700c6b270fe7.jpg

ಬೆಂಗಳೂರು: ಫ್ಲಿಪ್‌ ಕಾರ್ಟ್‌ ಕಸ್ಟಮರ್‌ ಕೇರ್‌ ಸಿಬ್ಬಂದಿ ಎಂದು ನಂಬಿಸಿ, ಮಹಿಳೆಯೊಬ್ಬರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ.

ಈ ಸಂಬಂಧ ಸಂಪಿಗೆಹಳ್ಳಿ ನಿವಾಸಿ ಅನುಸೂಯ ಈಶಾನ್ಯ ವಿಭಾಗದ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಅನುಸೂಯ ಎಂಬಾಕೆ ಫ್ಲಿಪ್‌ ಕಾರ್ಟ್‌ನಲ್ಲಿ ಟೀಶರ್ಟ್‌ ಬುಕ್‌ ಮಾಡಿದ್ದರು. ಆದರೆ, ನಿಗದಿತ ಸಮಯಕ್ಕೆ ಬಾರದಕ್ಕೆ ಗೂಗಲ್‌ನಲ್ಲಿ ಸಿಕ್ಕ ಫ್ಲಿಪ್‌ ಕಾರ್ಟ್‌ ಕಸ್ಟಮರ್‌ ಕೇರ್‌ ನಂಬರ್‌ಗೆ ಕರೆ ಮಾಡಿದ್ದಾರೆ.

ಆ ಕಡೆ ಕರೆ ಸ್ವೀಕರಿಸಿದ ವ್ಯಕ್ತಿ, ಸಮಸ್ಯೆ ಬಗೆಹರಿಸುತ್ತೇವೆ ಎಂದು ನಂಬಿಸಿದ್ದಾನೆ. ಬಳಿಕ ಏನಿಡೆಸ್ಕ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಿ, ಮಹಿಳೆಯಿಂದ ಒಟಿಪಿ ಪಡೆದುಕೊಂಡಿದ್ದಾನೆ.

ಬಳಿಕ ಅನುಸೂಯ ಅವರ ಖಾತೆಯಿಂದ 34,057 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ ಎಂದು ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!