March 20, 2026

ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ರಜತ ಮಹೋತ್ಸವ: ಗೋಪುರ ಉದ್ಘಾಟನೆ ಮತ್ತು ದಿವ್ಯ ಬಲಿಪೂಜೆ ನೆರವೇರಿಸಿದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

0
image_editor_output_image-274167674-1652443139100.jpg

ವಿಟ್ಲ: ಸಮೀಪದ ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಚರ್ಚ್ ಜೀರ್ಣೋದ್ಧಾರ ಮತ್ತು ರಜತ ಮಹೋತ್ಸವ ಅಂವಾಗಿ ನವೀಕೃತ ದೇವಾಲಯದ ಗೋಪುರ ಉದ್ಘಾಟನೆ ಮತ್ತು ದಿವ್ಯ ಬಲಿಪೂಜೆ ಕಾರ್ಯಕ್ರಮ ನಡೆಯಿತು.

ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನವೀಕೃತ ದೇವಾಲಯದ ಗೋಪುರ ಉದ್ಘಾಟಿಸಿ, ಭವ್ಯ ಬಲಿ ಪೂಜೆ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಾತನಾಡಿ
ಜನರು ಮನನ್ನಸ್ಸು ದೇವರ ಕಡೆಗೆ ತೆಗೆದುಕೊಂಡು ಹೋಗಬೇಕು. ಜಗತ್ತಿನ ಶಾಂತಿಗಾಗಿ ದೇವರನ್ನು ನಿತ್ಯ ಸ್ಮರಿಸುವ ಕಾರ್ಯವಾಗಬೇಕು. ಸ್ವರ್ಗ ಲೋಕಕ್ಕೆ ಹೋಗುವ ಹಾದಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂದು ಹೇಳಿದರು.

ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಅವರು ಮಾತನಾಡಿ ಅಪಾರ ಭಕ್ತರ ನಿರತರ ಪರಿಶ್ರಮದಿಂದ ಗೋಪುರ ನಿರ್ಮಾಣಗೊಂಡಿದೆ. ಇಲ್ಲಿನ ಜನರ ಸಹಕಾರ ಅವಿಸ್ಮರಣೀಯ ಎಂದರು.

ಚರ್ಚ್ ಪೂರ್ವ ಧರ್ಮಗುರುಗಳನ್ನು, ಚರ್ಚ್ ಪುನರ್ ನಿರ್ಮಾಣಕ್ಕೆ ಸಹಕರಿಸಿದವರನ್ನು, ವಿವಿಧ ಕಾರ್ಯ ನಿರ್ವಹಿಸಿದವರನ್ನು ಗೌರವಿಸಲಾಯಿತು. ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅವರನ್ನು ಸನ್ಮಾನಿಸಲಾಯಿತು. ನೂತನ ಮನೆಯನ್ನು ಪ್ರವೀಣ್ ಡಿಸೋಜ ಸಾಯ ಅವರಿಗೆ ಹಸ್ತಾಂತರ ಮಾಡಲಾಯಿತು.

ಮೊಗರ್ನಾಡ್ ವಲಯ ಧರ್ಮಗುರುಗಳಾದ ಡಾ. ಮಾರ್ಕ್ ಕ್ಯಾಸ್ತೆಲಿನೊ, ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಸರಸ್ವತಿ, ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ವಿಲಿಯಂ ಎಂ. ಡಿಸೋಜ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ ಮತ್ತಿಐರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!