ಪಟಾಕಿ ಖರೀದಿ, ಮಾರಾಟಕ್ಕೆ ಅನುಮತಿಸಲಾಗುವುದಿಲ್ಲ: ದೆಹಲಿ ಹೈಕೋರ್ಟ್
ನವದೆಹಲಿ: ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ರಾಷ್ಟ್ರ ರಾಜಧಾನಿಯ ಹೊರಗೆ ಪಟಾಕಿಗಳನ್ನು ಬಳಸಲು ಬಯಸುವವರಿಗೂ ಸಹ ದೆಹಲಿಯೊಳಗೆ ಪಟಾಕಿ ಖರೀದಿ ಅಥವಾ ಮಾರಾಟಕ್ಕೆ ಅನುಮತಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.
ಪಟಾಕಿ ವ್ಯಾಪಾರಸ್ಥರ ಬಳಿ ಇರುವ ದಾಸ್ತಾನನ್ನು ನಗರದ ಹೊರಗೆ ಹೋಗಿ ಮಾರಾಟ ಮಾಡಲು ಅಥವಾ ಹೊರ ಭಾಗದಿಂದ ನಗರಕ್ಕೆ ಬಂದು ಪಟಾಕಿ ಖರೀದಿಸಲು ಅನುಮತಿ ನೀಡಬೇಕೆಂದು ಕೋರಿ 53 ಪಟಾಕಿ ತಯಾರಕರು ಹಾಗೂ ವ್ಯಾಪಾರಿಗಳು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.