July 3, 2026

ಪಾಕ್ ಸೇನೆಗೆ ಸೂಕ್ಷ್ಮವಾದ ಮಾಹಿತಿ ಸೋರಿಕೆ: ಭಾರತೀಯ ವಾಯುಪಡೆಯ ಅಧಿಕಾರಿ ದೇವೇಂದರ್ ಶರ್ಮಾ ಬಂಧನ

0
image_editor_output_image-1644923480-1652344236094.jpg

ನವದೆಹಲಿ: ಪಾಕ್ ಮೂಲದ ಮಹಿಳಾ ಏಜೆಂಟ್ ಮಾಡಿದ  ಹನಿಟ್ರ್ಯಾಪ್  ಜಾಲಕ್ಕೆ ಸಿಲುಕಿ ಸೇನೆಗೆ ಸಂಬಂಧಿಸಿದ ಸೂಕ್ಷ್ಮವಾದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇರೆಗೆ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

 32 ವರ್ಷದ ದೇವೇಂದರ್ ನಾರಾಯಣ್ ಶರ್ಮಾ ಬಂಧಿತ ಅಧಿಕಾರಿಯಾಗಿದ್ದಾರೆ.  ನವದೆಹಲಿಯ ಸುಬ್ರೋತೊ ಪಾರ್ಕ್ ನಲ್ಲಿ ಎಎಎಫ್ ರೆಕಾರ್ಡ್ ಆಫೀಸ್ ನಲ್ಲಿ ಆಡಳಿತ ಸಹಾಯಕ (ಜಿಡಿ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶರ್ಮಾ ಅವರ ವಿಚಾರಣೆ ವೇಳೆಯಲ್ಲಿ ಪಾಕ್ ಮೂಲದ ಮಹಿಳೆಯೊಂದಿಗೆ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದು,  ಆಕೆಯೊಂದಿಗೆ ರಾಷ್ಟ್ರದ ಭದ್ರತೆ, ರಕ್ಷಣೆ ಮತ್ತು ಸೇನಾ ಸಿಬ್ಬಂದಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಕಂಪ್ಯೂಟರ್ ಮತ್ತಿತರ ಪೈಲ್ ಗಳಿಂದ ಸೂಕ್ಷ್ಮವಾದ ಮಾಹಿತಿ ಸೋರಿಕೆಯಾಗಿರುವುದು ಕಂಡುಬಂದ ನಂತರ ವಾಟ್ಸಾಪ್ ನಲ್ಲಿ ಪಾಕ್ ಮೂಲದ ಏಜೆಂಟ್ ಗೆ ಮಾಹಿತಿ ಸೋರಿಕೆ ಮಾಡಿರುವುದನ್ನು ಪತ್ತೆ ಹಚ್ಚಿದ ದೆಹಲಿ ಅಪರಾಧ ವಿಭಾಗದ ಪೊಲೀಸರು ಮೇ 6 ರಂದು ಶರ್ಮಾನನ್ನು ಬಂಧಿಸಿದರು. ಮಾಹಿತಿ ಸೋರಿಕೆಗಾಗಿ ಶರ್ಮಾ ಪಾಕ್ ಮಹಿಳೆಯಿಂದ ಹಣ ಕೂಡಾ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಭಾರತೀಯ ವಾಯುಪಡೆಯಿಂದ ದೂರು ಸ್ವೀಕರಿಸಿದ ನಂತರ ಅಧಿಕೃತ ರಹಸ್ಯ ಕಾಯ್ಡೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೇ 6 ರಂದು ಶರ್ಮಾ ಅವರನ್ನು ಬಂಧಿಸಿದ್ದು ಸೇವೆಯಿಂದ ಅಮಾನತು ಮಾಡಲಾಗಿದೆ. ಬಂಧಿತನಿಂದ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳು, ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!