February 3, 2026

ವಾಮಂಜೂರು: ಮಹಡಿಯಿಂದ ಬಿದ್ದು ಕಟ್ಟಡ ಕಾರ್ಮಿಕ ಮೃತ್ಯು

0
image_editor_output_image-1795931616-1652332224505.jpg

ಮಂಗಳೂರು: ಕಟ್ಟಡ ಕಾರ್ಮಿಕರೊಬ್ಬರು ಮಹಡಿಯಿಂದ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ವಾಮಂಜೂರಿನ ದೇವರ ಪದವು ಎಂಬಲ್ಲಿ ಬುಧವಾರ ನಡೆದಿದೆ.

ಮೃತರನ್ನು ಮೂಡುಶೆಡ್ಡೆ ನಿವಾಸಿ ಹರಿಶ್ಚಂದ್ರ (50) ಎಂದು ಗುರುತಿಸಲಾಗಿದೆ.

ಜೆಸಿಂತಾ ರೇಗೋ ಎಂಬುವರಿಗೆ ಸೇರಿದ ಮನೆಯ ಮೊದಲ ಮಹಡಿಯಲ್ಲಿ ಕಲ್ಲು ಕಟ್ಟುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಮೃತರ ಪುತ್ರ ಪ್ರಮೋದ್ ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ವೀರಪ್ಪ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!