February 2, 2026

ಮಕ್ಕಳಲ್ಲಿ ಟೊಮೆಟೊ ಜ್ವರದ ಭೀತಿ: ಕೇರಳದಲ್ಲಿ ಮಕ್ಕಳಲ್ಲಿ 80ಕ್ಕೂ ಮಕ್ಕಳಲ್ಲಿ ಸೋಂಕು

0
Screenshot_2022-05-11-17-41-13-95_680d03679600f7af0b4c700c6b270fe7.jpg

ಕೊಚ್ಚಿ: ಪುಟ್ಟ ಮಕ್ಕಳಲ್ಲಿ ಟೊಮೆಟೋ ಜ್ವರದ ಭೀತಿ ಹೆಚ್ಚಾಗಿದೆ. ಕೇರಳದಲ್ಲಿ ಈಗಾಗಲೇ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ.

ಕೇರಳದಲ್ಲಿ ಟೊಮೆಟೊ ಜ್ವರದ ಪ್ರಕರಣ ದಿನೇದಿನೇ ಜಾಸ್ತಿಯಾಗುತ್ತಿರುವುದು ಆತಂಕ ತಂದಿದೆ. ತಮಿಳುನಾಡು ಮತ್ತು ಕೇರಳದ ಗಡಿ ವಾಲಾಯರ್‌ನಲ್ಲಿ ಜ್ವರ ಲಕ್ಷಣ ಹೆಚ್ಚು ಕಂಡು ಬಂದಿದೆ.

ಹೀಗಾಗಿ ಕೊಯಮತ್ತೂರ್‌ಗೆ ಪ್ರವೇಶಿಸಲು ವಾಹನದಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಂಡವು ಪರೀಕ್ಷೆ ನಡೆಸುತ್ತಿದೆ. ಅಂಗನವಾಡಿಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲೆಂದೇ ಇಲ್ಲಿ ವಿಶೇಷವಾಗಿ 24 ಸದಸ್ಯರ ತಂಡವನ್ನು ರಚನೆ ಮಾಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಇದೊಂದು ರೀತಿಯ ಗುರುತಿಸಲಾಗದ ಜ್ವರವಾಗಿದೆ. ವೈರಲ್ ಜ್ವರವೇ, ಚಿಕುನ್ ಗುನ್ಯಾವೇ ಅಥವಾ ಡೆಂಗ್ಯೂ ಜ್ವರದ ನಂತರ ಉಂಟಾಗುವ ಪರಿಣಾಮವೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವಿಪರೀತ ಜ್ವರದೊಂದಿಗೆ ದದ್ದು ಏಳುವುದು, ಚರ್ಮದಲ್ಲಿ ಕಿರಿಕಿರಿ, ತುರಿಸುವಿಕೆ, ನಿರ್ಜಲೀಕರಣ ಸಮಸ್ಯೆ, ದೇಹದಲ್ಲಿ ಕೆಂಪು ಗುಳ್ಳೆಗಳು ಕಾಣುವುದು ಮುಂತಾದ ಲಕ್ಷಣಗಳನ್ನು ಈ ಜ್ವರ ಹೊಂದಿದೆ.

ಕೈಕಾಲು ಚರ್ಮದ ಬಣ್ಣ ಬದಲಾಗುವುದು, ಕಿಬ್ಬೊಟ್ಟೆ ಸೆಳೆತ, ವಾಂತಿ, ಅತಿಸಾರ, ಮೂಗು ಸ್ರವಿಸುವಿಕೆ, ಆಯಾಸ, ಸೀನು, ದೇಹದಲ್ಲಿ ನೋವು ಮುಂತಾದ ಲಕ್ಷಣಗಳೂ ಕಂಡು ಬರುತ್ತವೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!