ಸತ್ತಿಗೇರಿ ಮಡ್ಡಿ ತೋಟದ ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ ಕಿಡಿಗೇಡಿಗಳು
ಬೆಳಗಾವಿ : ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ಸತ್ತಿಗೇರಿ ಮಡ್ಡಿ ತೋಟದ ಮಸೀದಿ ಮೇಲೆ ಕಿಡಿಗೇಡಿಗಳು ಕೇಸರಿ ಬಣ್ಣದ ಧ್ವಜ ಕಟ್ಟಿ, ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ.
ಕಿಡಿಗೇಡಿಗಳು ರಾತ್ರೋ ರಾತ್ರಿ ಈ ಕೃತ್ಯ ಎಸಗಿದ್ದು, ಮುಸ್ಲಿಮರು ಬೆಳಗ್ಗೆ ಪ್ರಾರ್ಥನೆಗೆ ಮಸೀದಿಗೆ ಆಗಮಿಸಿದಾಗ ಕೇಸರಿ ಧ್ವಜ ಕಟ್ಟಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಸ್ಥಳೀಯ ಹಿಂದೂ-ಮುಸ್ಲಿಂ ಮುಖಂಡರು ಸೇರಿ ಮಸೀದಿ ಮೇಲೆ ಕಟ್ಟಲಾಗಿದ್ದ ಧ್ವಜ ತೆರವುಗೊಳಿಸಿದ್ದು, ಗ್ರಾಮದಲ್ಲಿ ಶಾಂತಿ ನೆಲೆಸಿದೆ.
ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಮಸೀದಿಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.. ಅಲ್ಲದೇ ಸ್ಥಳೀಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ಬೆಳವಣಿಗೆಗಳ ಮೇಲೆ ಖಾಕಿ ನಿಗಾ ಇಟ್ಟಿದೆ.




