ಯುವಕನ ಚೂರಿಯಿಂದ ಇರಿದು ಬರ್ಬರ ಹತ್ಯೆ
ಮಂಡ್ಯ: ಯುವಕನನ್ನು ಇರಿದು ಕೊಲೆ ಮಾಡಿರುವ ಘಟನೆ ಮದ್ದೂರು ತಾಲೂಕು ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೊಪ್ಪ ಗ್ರಾಮದ ನಿವಾಸಿ ಯುವಕ ಸಾಗರ್(25) ಕೊಲೆಯಾದ ಯುವಕ.
ಡಾಬದಲ್ಲಿ ಊಟ ಮಾಡುತಿದ್ದ ಸಾಗರ್, ಪಕ್ಕದ ಟೇಬಲ್ ನಲ್ಲಿ ನಡೆಯುತ್ತಿದ್ದ ಯುವಕರ ಜಗಳಬಿಡಿಸಲು ಯತ್ನಿಸಿದಾಗ ಗಿರೀಶ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ರಾಕೇಶ್ ಎಂಬತನನ್ನು ಪೋಲಿಸರು ಬಂಧಿಸಿದ್ದು, ಗಿರೀಶ್, ಪ್ರತಾಪ್ ಪರಾರಿಯಾಗಿದ್ದಾರೆ. ಈ ಕುರಿತು ಕೊಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿದೆ.




