ವಿಟ್ಲ: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ
ವಿಟ್ಲ: ಕನ್ಯಾನದ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಘಟನೆ ಖಂಡಿಸಿ, ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಸ್ವಯಂ ಪ್ರೇರಿತ ಬಂದ್ ಆಚರಿಸಿ, ಕನ್ಯಾನ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ ಕೃಷಿ ಕೆಲಸದ ಕಾರ್ಯ ನಿರ್ವಹಸುತ್ತಿದ್ದ ಕುಟುಂಬ ಬಡತನದಲ್ಲಿ ದಿನ ಕಳೆಯುತ್ತಿದ್ದರು. ಪ್ರೀತಿಯ ನಾಟಕದ ಜತೆಗೆ ವಾಮಾಚಾರಕ್ಕೆ ಹೆಣ್ಣು ಮಗು ಬಲಿಯಾಗಿದೆ. ಲವ್ ಜಿಹಾದ್ ಅನ್ನು ಬುಡ ಸಹಿತ ಕೀಳಬೇಕು. ಆರೋಪಿ ಮುಸ್ಲಿಂ ಎಂಬ ಕಾರಣಕ್ಕೆ ಸಮುದಾಯದ ಮುಖಂಡರು ಮೌನವಾಗಿದ್ದಾರೆ. ಆತ್ಮಹತ್ಯೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಕರೆ ನೀಡಿದ ಬಂದ್ ಗೆ ಮುಸ್ಲಿಮರು ಬೆಂಬಲ ನೀಡದಿದ್ದಾಗ ಸಮುದಾಯ ಮೇಲೆ ಅನುಮಾನಗಳು ಉಂಟಾಗುತ್ತಿದೆ. ದಲಿತ್ ಪರ ಹೋರಾಟ ಎಂದು ಬೊಗಳೆ ಬಿಡುವ ಎಸ್ ಡಿ ಪಿ ಐ ಪಕ್ಷದ ಆನಂದ ಮಿತ್ತಬೈಲು, ಭಾಸ್ಕರ್ ಪ್ರಸಾದ್ ಈಗ ಎಲ್ಲಿದ್ದಾರೆ. ಮುಸಲ್ಮಾನರ ಬಿರಿಯಾನಿ ತಿನ್ನಲು ಬೇಕಾಗಿ ಅವರ ಹಿಂದೆ ಬಿದ್ದಿದ್ದಾರೆ. ಹಿಂದೂ ಸಂಘಟನೆಯನ್ನು ಅವರು ದೂರುತ್ತಾರೆ ಆದರೆ ನಮಗೆ ಬೇಸರವಿಲ್ಲ. ಆದರೆ ಆತ್ಮಿಕಾಳಿಗೆ ನ್ಯಾಯ ದೊರಕಿಸಿ ಕೊಡಲಿ ಎಂದ ಅವರು ಮುಂದಿನ ದಿನಗಳಲ್ಲಿ ಬಜರಂಗದಳದ ಕಾರ್ಯಕರ್ತರು ಇವರಿಗೆ ಚಪ್ಪಲಿಯಲ್ಲಿ ಹೊಡೆಯಲಿದ್ದಾರೆ ಎಂದು ಆರೋಪಿಸಿದರು.
ಕನ್ಯಾನ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿ ಬಂದು ಕನ್ಯಾನ ಜಂಕ್ಷನ್‌ನ ರಸ್ತೆ ಮಧ್ಯೆದಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ಮೂರು ರಸ್ತೆಗಳಲ್ಲಿ ಸುಮಾರು ೧ ಗಂಟೆಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿತ್ತು. ಕೆಲವು ಅಂಗಡಿ ಮಾಲಕರು ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡಿ ಬೆಂಬಲ ನೀಡಿದರು. ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಎಚ್ ಇ ಅವರ ನೇತೃತ್ವದಲ್ಲಿ ಬಿಗೀ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ , ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ, ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳ ಮುಖಂಡರಾದ ಕೃಷ್ಣಪ್ಪ ಕಲ್ಲಡ್ಕ, ಗೋವರ್ಧನ, ಪದ್ಮನಾಭ ಕಟ್ಟೆ, ಲೊಕೇಶ್ ಗೌಡ ಕನ್ಯಾನ, ಕೃಷ್ಣಪ್ಪ ಗೌಡ ಪಣೆಯಡ್ಕ, ಚಂದ್ರಹಾಸ ಕನ್ಯಾನ, ದಯಾನಂದ ಉಜಿರೆಮಾರು, ಲಿಂಗಪ್ಪ ಗೌಡ ಪನೆಯಡ್ಕ, ಶಿವಪ್ರಸಾದ್ ಶೆಟ್ಟಿ ಅನೆಯಾನಗುತ್ತು, ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಕುಮಾರ್ ಭಟ್ ಬದಿಕ್ಕೋಡಿ, ಮನೋಜ್ ಕುಮಾರ್ ಬನಾರಿ, ಶ್ರೀಲತಾ ಮತ್ತಿತರರು ಉಪಸ್ಥಿತರಿದ್ದರು.




