May 10, 2026

ಮೂಡಬಿದಿರೆ: ಸಿಡಿಲು ಬಡಿದು ಇಬ್ಬರು ಯುವಕರು ಮೃತ್ಯು

0
IMG-20211101-WA0018.jpg

ಮಂಗಳೂರು: ಮೂಡಬಿದಿರೆಯ ತಾಲೂಕಿನ ಕಂಚಿಬೈಲು ಬಳಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.

ಯಶವಂತ(22) ಮತ್ತು ಮಣಿ ಪ್ರಸಾದ್(22) ಮೃತಪಟ್ಟವರು ಎಂದು ಹೇಳಲಾಗಿದೆ. ಕಂಚಿಬೈಲ್ ನಿವಾಸಿಗಳಾಗಿದ್ದ ಇಬ್ಬರು ಕೂಲಿ ಕಾರ್ಮಿಕರಾಗಿದ್ದು, ಅವರೊಂದಿಗಿದ್ದ ಗಣೇಶ್, ಸಂದೀಪ್ ಮತ್ತು ಪ್ರವೀಣ್ ಅವರು ಅಸ್ವಸ್ಥರಾಗಿದ್ದಾರೆ. ಅವರನ್ನು ಮೂಡಬಿದರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಚಿಬೈಲ್ ಪ್ರದೇಶದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಯರಗುಂಡಿ ಫಾಲ್ಸ್ ಗೆ ತೆರಳಿದ್ದ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಮೂಡಬಿದರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

error: Content is protected !!