March 22, 2026

ಉಳ್ಳಾಲ: ವ್ಯಕ್ತಿಗೆ ಹಲ್ಲೆ, ಚೂರಿ ಇರಿತ ಪ್ರಕರಣ: ಆರೋಪಿ ಬಂಧನ

0
n3842437681651996297458e575b62820e49c72fa981e8152df8fde49129d0c451195c73c465e07a5a25a97.jpg

ಉಳ್ಳಾಲ: ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ತಾಯಿಗೆ ಅವಾಚ್ಯ ಶಬ್ದ ಗಳಿಂದ ಬೈದ ಬಗೆ ವಿಚಾರಿಸಲು ಹೋದ ರಿಜ್ವಾನ್ ಎಂಬವರಿಗೆ ಹಲ್ಲೆ ಮಾಡಿ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಂಕರ್ ಚಾಲಕ ಮೇಲಂಗಡಿ ನಿವಾಸಿ ಖಲೀಲ್ ಎಂಬಾತನನ್ನು ಜಪ್ಪು ನೇತ್ರಾವತಿ ಬ್ರಿಡ್ಜ್ ಬಳಿ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಎಪ್ರಿಲ್ 29 ರಂದು ನಗರ ಸಭೆಯ ನೀರು ಸರಬರಾಜು ಮಾಡದ ಬಗ್ಗೆ ಚೆಂಬು ಗುಡ್ಡೆ ನಿವಾಸಿ ರಿಜ್ವಾನ್ ತಾಯಿ ವಿಚಾರಿಸಿದ್ದರು. ಈ ವೇಳೆ ಆರೋಪಿ ಖಲೀಲ್ ರಿಜ್ವಾನ್ ತಾಯಿ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದೇ ಘಟನೆ ಯನ್ನು ಮಾಸ್ತಿಕಟ್ಟೆ ಬಳಿ ಟ್ಯಾಂಕರ್ ಚಾಲಕ ಖಲೀಲ್ ನಲ್ಲಿ ರಿಜ್ವಾನ್ ವಿಚಾರಿಸಿದ್ದ ಈ ವೇಳೆ ಮಾತಿಗೆ ಮಾತು ಬೆಳೆದು ರಿಜ್ವಾನ್ ಗೆ ಖಲೀಲ್ ಚೂರಿಯಿಂದ ಇರಿದು ಪರಾರಿಯಾಗಿದ್ದ.

ಈ ಬಗ್ಗೆ ರಿಜ್ವಾನ್ ಸ್ನೇಹಿತ ಸೈಫುದ್ದೀನ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮೆರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ಖಲೀಲ್ ಎಂಬಾತನನ್ನು ಉಳ್ಳಾಲ ಪೊಲೀಸರು ಶನಿವಾರ ಜಪ್ಪು ನೇತ್ರಾವತಿ ಬ್ರಿಡ್ಜ್ ಬಳಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!