July 6, 2026

ಯುವತಿಯ ಅತ್ಯಾಚಾರ: ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ನ ಬಂಧನ

0
Screenshot_2022-05-05-13-54-08-69_680d03679600f7af0b4c700c6b270fe7.jpg

ಬೆಂಗಳೂರು: ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆಯಲು ಬಂದಿದ್ದ ಮಹಾರಾಷ್ಟ್ರ ಮೂಲದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆಪಾದನೆ ಮೇರೆಗೆ ಬಾಡಿ ಬಿಲ್ಡರ್‌ ನನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಾಣಸವಾಡಿಯ ಸೈಯದ್‌ ಸಿದ್ಧಿಕ್‌ (35) ಬಂಧಿತ.

ಆರೋಪಿ ವಿರುದ್ಧ ಮಹಾರಾಷ್ಟ್ರ ಮೂಲದ 23 ವರ್ಷದ ಸಂತ್ರಸ್ತೆ ದೂರು ನೀಡಿದ್ದರು. ಸೈಯದ್‌ ಸಿದ್ಧಿಕ್‌ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ಆಗಿದ್ದು, ಹಲವು ಬಾಡಿ ಬಿಲ್ಡರ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ.

ಸ್ಪರ್ಧೆಗಳಲ್ಲಿ ಪ್ರದರ್ಶಿಸಿದ್ದ ವಿಡಿಯೋ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಈ ವಿಡಿಯೋ ಹಾಗೂ ಚಿತ್ರಗಳನ್ನು ನೋಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವತಿ ಲೈಕ್‌ ಕಮೆಂಟ್‌ ಮಾಡುತ್ತಿದ್ದಳು.

ಇದೇ ವೇಳೆ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ಯುವತಿ ಜತೆ ಆರೋಪಿ ಚಾಟಿಂಗ್‌ ನಡೆಸುತ್ತಿದ್ದ. ಆಗ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಆಸಕ್ತಿಯಿದ್ದು, ಅದಕ್ಕೆ ತರಬೇತಿ ನೀಡುವಂತೆ ಸಿದ್ಧಿಕ್‌ನನ್ನು ಸಂತ್ರಸ್ತೆ ಕೇಳಿಕೊಂಡಿದ್ದರು. ಅದಕ್ಕೆ ಆರೋಪಿ ಒಪ್ಪಿಕೊಂಡಿದ್ದ.

Leave a Reply

Your email address will not be published. Required fields are marked *

You may have missed

error: Content is protected !!