November 22, 2024

ಮೇ 13ರಂದು ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ರಜತ ಮಹೋತ್ಸವ

0

ವಿಟ್ಲ: ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಇದರ ಜೀರ್ಣೋದ್ಧಾರ ಮತ್ತು ರಜತ ಮಹೋತ್ಸವ ಕಾರ್ಯಕ್ರಮ ಮೇ 13 ರಂದು ನಡೆಯಲಿದ್ದು, ನವೀಕೃತ ದೇವಾಲಯದ ಗೋಪುರ ಉದ್ಘಾಟನೆ ಮತ್ತು ದಿವ್ಯ ಬಲಿಪೂಜೆ ನಡೆಯಲಿದೆ ಎಂದು ಚರ್ಚ್ ಧರ್ಮಗುರು ವಿಶಾಲ್ ಮೋನಿಸ್ ಹೇಳಿದರು.

ಅವರು ಬುಧವಾರ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಮೇ.೧೩ರಂದ ಬೆಳಿಗ್ಗೆ ೧೧ ಗಂಟೆಗೆ ಚರ್ಚ್ ವಠಾದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ ವಹಿಸಲಿದ್ದು, ಮೊಗರ್ನಾಡ್ ವಲಯ ಧರ್ಮಗುರುಗಳಾದ ಡಾ.ಮಾರ್ಕ್ ಕ್ಯಾಸ್ತೆಲಿನೊ, ಮಾಣಿಲ ಶ್ರೀಕ್ಷೇತ್ರ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಶ್ರೀಕೃಷ್ಣ ಗುರೂಜಿ, ಬದ್ರಿಯಾ ಜುಮಾ ಮಸೀದಿ ಪೆರುವಾಯಿ ಮಹಮ್ಮದ್ ಶರೀಫ್ ಮದನಿ, ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಮತ್ತು ವಿವಿಧ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ರಜತ ಮಹೋತ್ಸವ ಸಂಭ್ರದ ಪ್ರಯುಕ್ತ ಮೇ.೭ ರಂದು ಸಂಜೆ ೫ ರಿಂದ ರಾತ್ರಿ ೧೦ ರವರೆಗೆ ಹಾಗೂ ಮೇ.೮ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೧.೩೦ರವರೆಗೆ ವಿಶೇಷ ಆರಾಧನೆ ಮತ್ತು ಬಲಿಪೂಜೆ ನಡೆಯಲಿದ್ದು, ಆಲ್ಬನ್ ಡಿ’ಸೋಜ, ಪ್ರವೀಣ್ ಮೊಂತೇರೋ ಓಪಿ ಹಾಗೂ ಬ್ರದರ್ ಪ್ರಕಾಶ್ ಡಿ’ಸೋಜ ನಡೆಸಿಕೊಡಲಿದ್ದಾರೆ. ಮೇ.೧೪ರಂದು ಸುಮಾರು ೯.೫ಲಕ್ಷದಲ್ಲಿ ನಿರ್ಮಿಸಿದ ಎರಡು ನೂತನ ಮನೆಗಳನ್ನು ಪ್ರವೀಣ್ ಡಿಸೋಜ ಸಾಯ ಹಾಗೂ ಲ್ಯಾನ್ಸಿ ಕ್ರಾಸ್ತಾ ಕುಕ್ಕಾಜೆ ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ರೊನಾಲ್ಡ್ ಫೆರ್ನಾಂಡಿಸ್ ಹಸ್ತಾಂತರ ಮಾಡಲಿದ್ದಾರೆ ಎಂದರು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಡಿ’ಸೋಜ, ಕಾರ್ಯಾದರ್ಶಿ ವಿಲಿಯಂ ಯಂ ಡಿ ಸೋಜ, ಸದಸ್ಯ ರಾಲ್ಫ್ ಡಿಸೋಜ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!