May 15, 2026

ಕುಂಟಿಕಾನ: ಬಾವಿಯ ಬಳಿ ಯುವಕನ ಬೊಬ್ಬೆ ಸದ್ದು

0
Screenshot_2022-05-04-12-53-57-04_680d03679600f7af0b4c700c6b270fe7.jpg

ಮಂಗಳೂರು: ಕುಂಟಿಕಾನದ ಬಳಿ ರಾತ್ರಿ ವೇಳೆ ಬಾವಿಗೆ ಬಿದ್ದು ಗಾಯಗೊಂಡಿದ್ದ ಯುವಕನೋರ್ವನನ್ನು ಕದ್ರಿ ಅಗ್ನಿಶಾಮಕ ಸಿಬಂದಿಗಳು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಸ್ತೆ ಬದಿಯ ಮನೆಯೊಂದರ ಬಳಿ ಮುಂಜಾನೆಯಿಂದಲೇ ಯುವಕನ ಬೊಬ್ಬೆಕೇಳುತ್ತಿತ್ತು. ಹುಡುಕಾಡಿದಾಗ ಆತ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕದವರು ಕಾರ್ಯಚರಣೆ ನಡೆಸಿ ಯುವಕನನ್ನು ಮೇಲಕ್ಕೆತ್ತಿದ್ದಾರೆ.

ಈತನನ್ನು 25ರಿಂದ 26 ವರ್ಷ ವಯಸ್ಸಿನ ಅಸ್ಸಾಂ ಮೂಲದ ಯುವಕನೆಂದು ಗುರುತಿಸಲಾಗಿದೆ. ಈತ ಅಲ್ಲಿಗೆ ಯಾಕೆ ಬಂದಿದ್ದ, ಹೇಗೆ ಬಾವಿಗೆ ಬಿದ್ದ ಎಂಬುದು ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!